ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭ: ಸಿಎಂ ಮನೆಗೆ ಡಿಜಿಪಿ, ಎಡಿಜಿಪಿ ನೀಲಮಣಿ ಭೇಟಿ; ಮಾತುಕತೆ

ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದು, ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳ್ಳಂಬೆಳಿಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಗೌಪ್ಯ ಮಾತುಕತದೆ ನಡೆಸಿದ್ದಾರೆಂದು ಶನಿವಾರ ತಿಳಿದುಬಂದಿದೆ...
ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭ: ಸಿಎಂ ಮನೆಗೆ ಡಿಜಿಪಿ, ಎಡಿಜಿಪಿ ನೀಲಮಣಿ ಭೇಟಿ; ಗೌಪ್ಯ ಮಾತುಕತೆ
ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭ: ಸಿಎಂ ಮನೆಗೆ ಡಿಜಿಪಿ, ಎಡಿಜಿಪಿ ನೀಲಮಣಿ ಭೇಟಿ; ಗೌಪ್ಯ ಮಾತುಕತೆ
Updated on: 
ಬೆಂಗಳೂರು: ವಿಶ್ವಾಸಮತಯಾಚನೆಗೆ ಕ್ಷಣಗಣನೆ ಆರಂಭವಾಗಿದ್ದು, ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಳ್ಳಂಬೆಳಿಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಗೌಪ್ಯ ಮಾತುಕತದೆ ನಡೆಸಿದ್ದಾರೆಂದು ಶನಿವಾರ ತಿಳಿದುಬಂದಿದೆ. 
ಇಂದು ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸಕ್ಕೆ ಡಿಜಿಪಿ ಹಾಗೂ ಎಡಿಜಿಪಿ ನೀಲಮಣಿ ರಾಜು, ಗುಪ್ತಚರ ಇಲಾಖೆಯ ಎಡಿಜಿಪಿ ಅಮರ್ ಕುಮಾರ್ ಪಾಂಜೆ ಹಾಗೂ ಡಿಐಜಿ ಸಂದೀಪ್ ಪಾಟೀಲ್ ಅವರು ಭೇಟಿ ನೀಡಿದ್ದು, ಅಧಿಕಾರಿಗಳ ಜೊತೆಗೆ ಯಡಿಯೂರಪ್ಪ ಅವರು ಮಾತುಕತೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ. 
ಭಾರೀ ಹೈಡ್ರಾಮಗಳಿಗೆ ಸಾಕ್ಷಿಯಾಗಿರುವ ಕರ್ನಾಟಕದಲ್ಲಿನ ಹೊಸ ಸರ್ಕಾರ ರಚನೆಯ ಕಸರತ್ತಿಗೆ ಈಗ ಹೊಸ ತಿರುವು ಸಿಕ್ಕಿದೆ. ಬಹುಮತ ಸಾಬೀತಿಗೆ ರಾಜ್ಯಪಾಲರಿಂದ 15 ದಿನಗಳ ಕಾಲಾವಕಾಶ ಪಡೆದುಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್, ಇಂದು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ತಾಕೀತು ಮಾಡಿದೆ. ಜೊತೆಗೆ ಇದಕ್ಕೆ ಮುಂಚಿತವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ದೇಶನವನ್ನೂ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com