ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ : ಮೇ 28ಕ್ಕೆ ಮುಂದೂಡಿದ ನ್ಯಾಯಾಲಯ

ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 62 ನೇ ಸೆಷನ್ಸ್ ನ್ಯಾಯಾಲಯ ಮೇ 28ಕ್ಕೆ ಮುಂದೂಡಿದೆ.
ನಲಪಾಡ್, ವಿದ್ವತ್
ನಲಪಾಡ್, ವಿದ್ವತ್

ಬೆಂಗಳೂರು :  ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 62 ನೇ ಸೆಷನ್ಸ್  ನ್ಯಾಯಾಲಯ ಮೇ 28ಕ್ಕೆ ಮುಂದೂಡಿದೆ.

ನಲಪಾಡ್  ಜಾಮೀನು ಅರ್ಜಿ ಕುರಿತು ಇಂದು ವಿಚಾರಣೆ ನಡೆಯಿತು. ಜಾಮೀನು  ನೀಡಲು ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ  ವಿಚಾರಣೆಯನ್ನು ಮುಂದೂಡಿದೆ.

ಬೆಂಗಳೂರಿನ ಯೂಬಿ ಸಿಟಿಯಲ್ಲಿ  ಫೆಬ್ರವರಿ 17 ರಂದು ಮೊಹಮದ್ ನಲಪಾಡ್  ತನ್ನ ಸಹಚರರೊಂದಿಗೆ ವಿದ್ವತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಘಟನೆ ನಡೆದ ಎರಡು ದಿನಗಳ ನಂತರ ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಲಪಾಡ್  ಪೊಲೀಸರಿಗೆ ಶರಣಾಗಿದ್ದ.

ನಲಪಾಡ್ ಜಾಮೀನು ಅರ್ಜಿ ಹೈಕೋರ್ಟ್ ನಿಂದಲೂ ತಿರಸ್ಕೃತಗೊಂಡಿತ್ತು.  ನಲಪಾಡ್ ಗೆ ಜಾಮೀನು ದೊರೆತರೆ ಸಾಕ್ಷ್ಯ ನಾಶವಾಗುವ ಭೀತಿಯಿದೆ ಎಂದು ಶ್ಯಾಮ್ ಸುಂದರ್  ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದ್ದರಿಂದ ಆ ಕುರಿತ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com