ಗೋವಾದಿಂದ ಕರ್ನಾಟಕ ಮೀನಿಗೆ ನಿರ್ಬಂಧ: ಕರಾವಳಿಯಲ್ಲಿ ಪಾತಾಳಕ್ಕಿಳಿದ ಮೀನಿನ ಧಾರಣೆ

ಗೋವಾ ಕರ್ನಾಟಕದ ಮೀನು ಲಾರಿಗಳನ್ನು ಮಜಲಿ ಚೆಕ್ ಪೋಸ್ಟ್ ನಲ್ಲಿ ತಡೆಹಿಡಿದಿರುವ ಕಾರಣ ಮೀನಿನ ಧಾರಣೆ ಕುಸಿದಿದ್ದು ಕರಾವಳಿಯ ಮೀನುಗಾರರು ಕಂಗಾಲಾಗಿದ್ದಾರೆ.
ಮಲ್ಪೆ ಮೀನುಗಾರಿಕೆ ಬಂದರು
ಮಲ್ಪೆ ಮೀನುಗಾರಿಕೆ ಬಂದರು
ಉಡುಪಿ: ಗೋವಾ ಕರ್ನಾಟಕದ ಮೀನು ಲಾರಿಗಳನ್ನು ಮಜಲಿ ಚೆಕ್ ಪೋಸ್ಟ್ ನಲ್ಲಿ ತಡೆಹಿಡಿದಿರುವ ಕಾರಣ ಮೀನಿನ ಧಾರಣೆ ಕುಸಿದಿದ್ದು ಕರಾವಳಿಯ ಮೀನುಗಾರರು ಕಂಗಾಲಾಗಿದ್ದಾರೆ.
ಉಡುಪಿ ಜಿಲ್ಲೆ ಮಲ್ಪೆ ಕಡಲ ಕಿನಾರೆ ಮೀನುಗಾರಿಕಾ ಪ್ರದೇಶದಲ್ಲಿ ಒಂದು ಕಿಲೋ ಸಮುದ್ರ ಮೀನು (ಅಂಜಲ್ ಮೀನು) ಈಗ 300 ರು.ಗೆ ಮಾರಾಟವಾಗುತ್ತಿದೆ. ಇದಕ್ಕೆ ಎರಡು ವಾರಗಳ ಹಿಂದೆ ಇದೇ ಮೀನು ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿತ್ತು.ಇದೇ ರೀತಿ ಕಪ್ಪು ಹಾಗೂ ಬಿಳಿ ಪೋಂಫ್ರೆಟ್ ಮೀನುಗಳ ಧಾರಣೆ ಸಹ ಕುಸಿದಿದೆ.ಕಪ್ಪು ಮೀನಿಗೆ 250 ರು. ಬಿಳಿ ಪೋಂಫ್ರೆಟ್ ಮೀನುಗಳಿಗೆ 500 ರು. ಗಳು ಸಿಗುತ್ತಿದೆ.
ಈ ಸಂಬಂಧ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಗೋವಾ ಆಹಾರ ಇಲಾಖೆಯ ಅಧಿಕಾರಿಗಳು ಕರ್ನಾಟಕದಿಂದ ಮೀನಿನ ಸರಬರಾಜುಗಳನ್ನು ಅನುಮತಿಸುವುದಿಲ್ಲ ಎಂದು ಆರೋಪಿಸಿದ್ದು ಕರ್ನಾಟಕದ ಮೀನಿನಲ್ಲಿ ಫಾರ್ಮಾಲಿನ್ ರಾಸಾಯನಿಕವಿದೆ ಎಂದು ಗೋವಾ ಹೇಳುತ್ತಿದೆ. ಆದರೆ ಜುಲೈನಲ್ಲಿ  "ಸ್ಥಳೀಯ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಎರಡು ಬಾರಿ ಪರೀಕ್ಷೆ ನಡೆಸಿದಾಗಲೂ ಇಂತಹಾ ಯಾವ ರಾಸಾಯನಿಕ ಅಂಶಗಳು ಪತ್ತೆಯಾಗಿರಲಿಲ್ಲ. ಸುಮಾರು 10 ದಿನಗಳ ಹಿಂದೆ ಗೋವಾ ಆಹಾರ ಇಲಾಖೆ ಅಧಿಕಾರಿಗಳು ಕರ್ನಾಟಕದ ಮೀನಿನ ಲಾರಿಗಳನ್ನು ತಡೆಹಿಡಿದಿದ್ದಾರೆ." ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಫಿಶ್ ಮಾರ್ಕೆಟಿಂಗ್ ಫೆಡರೇಶನ್ ನ ಯಶ್ ಪಾಲ್ ಸುವರ್ಣ ಹೇಳಿದಂತೆ ಗೋವಾ ಮೀನುಗಾರರ ಲಾಬಿಗೆ ಮಣಿದ ಅಧಿಕಾರಿಗಳು ಈ ಆಟ ಹುಡಿದ್ದಾರೆ.ಮಲ್ಪೆ ಬಂದರಿನಮೀನುಗಾರರು ಮೀನುಗಳ ಗುಣಮಟ್ಟದ ಖಾತ್ರಿಗಾಗಿ ಪರೀಕ್ಷೆ ನಡೆಸಲು ಸಿದ್ದರಿದ್ದಾರೆ.ಈ ಹಿಂದೆ ನಡೆದಿದ್ದ ಪರೀಕ್ಷೆಗಳು ಸಹ ಮೀನುಗಳಲ್ಲಿ ಯಾವ ರಾಸಾಯನಿಕ ಅಂಶಗಳಿಲ್ಲ ಎಂದು ಖಾತ್ರಿಪಡಿಸಿದೆ.ಹೀಗಾಗಿ ಇದು ಗೋವಾ ವ್ಯಾಪಾರಿಗಳ ಪಿತೂರಿಯಾಗಿದೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com