ಬಳ್ಳಾರಿ: ಹಡಗಲಿ ಪುರಸಭೆ ಸದಸ್ಯನೋರ್ವ ತನ್ನ ಪತ್ನಿಯ ಸಹೋದರಿ ತುಟಿಗೆ ಚುಂಬನ ನೀಡಿರುವ ಫೋಟೋವನ್ನು ತಾನೇ ವಾಟ್ಸ್ಆ್ಯಪ್ ನಲ್ಲಿ ಹರಿಬಿಟ್ಟು ಪೇಚಿಗೆ ಸಿಲುಕಿದ್ದಾನೆ.
ಕುಡಿದ ಮತ್ತಿನಲ್ಲಿ ನಾದಿನಿಗೆ ಪುರಸಭೆ ಸದಸ್ಯ ಮುತ್ತು ನೀಡಿದ್ದಾನೆ. ಅಲ್ಲದೇ ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಇಷ್ಟೇ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ತಾನು ಕ್ಲಿಕ್ಕಿಸಿದ ಫೋಟೋವನ್ನು ವಾಟ್ಸ್ ಆ್ಯಪ್ ಮೂಲಕ ಹರಿಬಿಟ್ಟಿದ್ದಾನೆ. ಈ ಫೋಟೋ ಇದೀಗ ವೈರಲ್ ಆಗಿದೆ.
ನಾಲ್ಕು ದಿನಗಳ ಹಿಂದೆಯಷ್ಟೇ ನಾದಿನಿ ತನ್ನ ಮನೆಗೆ ಬಂದಿದ್ದಳು. ಮನೆಯಲ್ಲಿ ಯಾರೂ ಇರದ ಕಾರಣ, ಪಾನಮತ್ತರಾಗಿದ್ದ ಪುರಸಭೆ ಸದಸ್ಯ ಆಕೆಯ ತುಟಿಗೆ ಮುತ್ತು ನೀಡಿದ್ದರು ಎನ್ನಲಾಗುತ್ತಿದೆ.
ಫೋಟೋ ವೈರಲ್ ಆಗುತ್ತಿದ್ದಂತೆ ಕುಟುಂಬದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ವಿಷಯ ತಿಳಿದ ಪೊಲೀಸರು ಪುರಸಭೆ ಸದಸ್ಯನನ್ನು ಠಾಣೆಗೆ ಕರೆಸಿದ್ದರು. ಅಲ್ಲಿಗೆ ಬಂದ ಕುಟುಂಬಸ್ಥರು ಇದು ನಮ್ಮ ಮನೆ ವಿಷಯ ಎಂದು ಹೇಳಿ ಸದಸ್ಯನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.