ಬೆಳೆ ವಿಮಾ ಯೋಜನೆ ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಮುಖ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(ಪಿಎಂಎಫ್ ಬಿವೈ)ಯ ಫಲಾನುಭವಿಗಳ ಸಂಖ್ಯೆ 80 ಲಕ್ಷದಷ್ಟು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ(ಪಿಎಂಎಫ್ ಬಿವೈ)ಯ ಫಲಾನುಭವಿಗಳ ಸಂಖ್ಯೆ 80 ಲಕ್ಷದಷ್ಟು ಕಡಿಮೆಯಾಗಿದ್ದು 2016-17 ಮತ್ತು 2017-18 5.7 ಕೋಟಿಯಿಂದ 4.9 ಕೋಟಿಗಿಳಿದಿದೆ.

ವಿಮಾ ಕಂಪೆನಿಗಳ ಸಮಸ್ಯೆಗಳ ಹೊರತಾಗಿ, ಹಲವು ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡುವಲ್ಲಿ ಕೂಡ ವೈಫಲ್ಯ ಕಂಡುಬಂದಿದೆ. ಯೋಜನೆಯನ್ನು ಕೈಬಿಡಲು ಇತ್ತೀಚೆಗೆ ಬಿಹಾರ ಸರ್ಕಾರ ಕೂಡ ಇತ್ತೀಚೆಗೆ ನಿರ್ಧರಿಸಿದ್ದು ಕೂಡ ಯೋಜನೆ ಹಿನ್ನಡೆಗೆ ಮತ್ತೊಂದು ಕಾರಣವಾಗಿದೆ. ಪ್ರತಿ ರಾಜ್ಯಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಫಲಾನುಭವಿಗಳ ವೈಯಕ್ತಿಕ ವಿವರಗಳನ್ನು ಸಲ್ಲಿಸುವಲ್ಲಿ ಕೊರತೆ, ಸಹಾಯವಾಣಿ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಮತ್ತು ರೈತರ ಅರ್ಜಿಗಳನ್ನು ಪರಿಷ್ಕರಿಸಲು ವಿಳಂಬ ಕೂಡ ಫಲಾನುಭವಿಗಳ ಸಂಖ್ಯೆಯಲ್ಲಿ ಇಳಿಮುಖವಾಗಲು ಕಾರಣವಾಗಿದೆ.

ದೇಶದಲ್ಲಿ ಮಹಾರಾಷ್ಟ್ರದಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಫಲಾನುಭವಿಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. 2016-17ರಲ್ಲಿದ್ದ 1.09 ಕೋಟಿಯಿಂದ 22.75 ಲಕ್ಷಕ್ಕೆ ಇಳಿಕೆಯಾಗಿದ್ದು 2017-18ರಲ್ಲಿ 87.22 ಲಕ್ಷಕ್ಕೆ ಇಳಿದಿದೆ.ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ 12.19 ಲಕ್ಷಕ್ಕೆ ಇಳಿದಿದ್ದು, ನಂತರದ ಅವಧಿಯಲ್ಲಿ 37.17 ಲಕ್ಷದಿಂದ 24.98 ಲಕ್ಷಕ್ಕೆ ಇಳಿಕೆಯಾಗಿದೆ. ರಾಜಸ್ತಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಕೂಡ ಇಳಿಮುಖ ಕಂಡುಬಂದಿದೆ.

ಯೋಜನೆಯ ಮೊದಲ ರಾಷ್ಟ್ರೀಯ ಪರಿಶೀಲನಾ ಸಮ್ಮೇಳನದ ಹೊರಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಿಶ್ ಭೂತಾನಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಫಲಾನುಭವಿಗಳ ಸಂಖ್ಯೆ ಇಳಿಕೆಯಾಗಿದೆ. ಒಂದೇ ವರ್ಷದಲ್ಲಿ ಫಲಾನುಭವಿಗಳ ಸಂಖ್ಯೆ ಶೇಕಡಾ 15ರಷ್ಟು ಕಡಿಮೆಯಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com