ಸುನಾಮಿ ಕಿಟ್ಟಿ
ರಾಜ್ಯ
ಮೀತಿ ಮೀರಿದ ಸುನಾಮಿ ಕಿಟ್ಟಿ ಕ್ರೌರ್ಯ: ಮನೆ ಮಾಲೀಕನಿಗೆ ಆವಾಜ್ ಹಾಕಿದ ಕಿಟ್ಟಿ!
ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಗಳಿಸಿದ್ದ ಸುನಾಮಿ ಕಿಟ್ಟಿ ಇತ್ತೀಚೆಗೆ ತಮ್ಮ ರಾದ್ಧಾಂತಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಅಪಹರಣ, ಒರಾಯಾನ್ ಮಾಲ್ ಗಲಾಟೆ ನಂತರ ಇದೀಗ ಮನೆ...
ಬೆಂಗಳೂರು: ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಗಳಿಸಿದ್ದ ಸುನಾಮಿ ಕಿಟ್ಟಿ ಇತ್ತೀಚೆಗೆ ತಮ್ಮ ರಾದ್ಧಾಂತಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. ಅಪಹರಣ, ಒರಾಯಾನ್ ಮಾಲ್ ಗಲಾಟೆ ನಂತರ ಇದೀಗ ಮನೆ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ.
ಬೆಂಗಳೂರಿನ ಶಂಕರ ಮಠದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಸುನಾಮಿ ಕಿಟ್ಟಿ ಕೆಲ ತಿಂಗಳುಗಳಿಂದ ಬಾಡಿಗೆ ಕೊಟ್ಟಿರಲಿಲ್ಲ. ಇದರಿಂದ ಬೇಸರಗೊಂಡಿದ್ದ ಮನೆ ಮಾಲೀಕ ಕಿಟ್ಟಿಯನ್ನು ಬಾಡಿಗೆ ಹಣ ನೀಡುವಂತೆ ಕೇಳಿದ್ದಾರೆ.
ಇದರಿಂದ ರೋಚಿಗೆದ್ದ ಕಿಟ್ಟಿ ಮನೆ ಮಾಲೀಕನಿಗೆ ಅವಾಜ್ ಹಾಕಿದ್ದಾನೆ. ತಿಂಗಳಿಗೆ 22 ಸಾವಿರದಂತೆ ಮನೆ ಬಾಡಿಗೆಗೆ ಪಡೆದಿದ್ದ ಕಿಟ್ಟಿ 4 ತಿಂಗಳಿನಿಂದ ಬಾಡಿಗೆ ಹಣ ನೀಡದೆ ಸತಾಯಿಸುತ್ತಿದ್ದ.
ಸುನಾಮಿ ಕಿಟ್ಟಿ ಬಾಡಿಗೆ ಹಣ ನೀಡದಿದ್ದು ಜತೆಗೆ ತನಗೆ ಆವಾಜ್ ಹಾಕಿದ್ದರಿಂದ ಮನೆ ಮಾಲೀಕ ಶಿವಣ್ಣ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಪೊಲೀಸರು ಕಿಟ್ಟಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ