ತುಂಡುಡುಗೆ ತೊಟ್ಟು ಬೀಚ್'ಗಳಲ್ಲಿ ಮಸ್ತಿ ಮಾಡುವ ಪುರುಷರಿಗೂ ಬರಲಿದೆ ಡ್ರೆಸ್'ಕೋಡ್?

ತುಂಡುಡುಗೆ ತೊಡ್ಡು ಬೀಚ್ ಗಳಲ್ಲಿ ಮೋಜು ಮಸ್ತಿ ಮಾಡುವ ಪುರುಷರಿಗೂ ಶೀಘ್ರದಲ್ಲಿಯೇ ಡ್ರೆಸ್ ಕೋಡ್ ತರುವ ಕುರಿತಂತೆ ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ತುಂಡುಡುಗೆ ತೊಡ್ಡು ಬೀಚ್ ಗಳಲ್ಲಿ ಮೋಜು ಮಸ್ತಿ ಮಾಡುವ ಪುರುಷರಿಗೂ ಶೀಘ್ರದಲ್ಲಿಯೇ ಡ್ರೆಸ್ ಕೋಡ್ ತರುವ ಕುರಿತಂತೆ ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. 
ಬೀಚ್ ಗಳಲ್ಲಿ ಪುರುಷರು ತುಂಡುಡುಗೆ ತೊಡುವವರ ವಿರುದ್ಧ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮೀಯವರು ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ. 
ಪತ್ರದಲ್ಲಿ ಬೀಚ್'ಗೆ ತೆರಳುವ ಪುರುಷರಿಗೆ ಡ್ರೆಸ್ ಕೋಡ್ ನೀಡುವಂತೆ ಈ ಕುರಿತು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಕುಮಾರಸ್ವಾಮಿಯವರು ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದೇ ಆದರೆ, ಇನ್ನು ಮುಂದೆ ಬೀಚ್'ಗೆ ತೆರಳುವ ಪುರುಷರೂ ಡ್ರೆಸ್ ಕೋಡ್ ಅನುಸರಿಸಬೇಕಾಗುತ್ತದೆ.
ರಜೆ ನಿಮಿತ್ತ ಗೋಕರ್ಣ ಬೀಚ್ ಬಳಿ ತೆರಳಿದ್ದಾಗ ಕೆಲ ಪುರುಷರು ನಗ್ನರಾಗಿ ಓಡಾಡುತ್ತಿರುವುದನ್ನು ನೋಡಿದ್ದೆ. ಪುರುಷಕರು ಈ ರೀತಿ ನಗ್ನರಾಗಿ ಓಡಾಡುವುಗು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಅಸಹಸ್ಯ ಹಾಗೂ ಭೀತಿ ಹುಟ್ಟಿಸುತ್ತದೆ. ಇದು ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗೆ ಬೆದರಿಕೆಯಾಗಿದೆ. ಬೀಚ್ ಬಳಿ ಎಲ್ಲಾ ರೀತಿಯ ಜನರು ಓಡಾಡುತ್ತಿರುತ್ತಾರೆ. ಬೀಚ್ ಬಳಿಯೂ ಭದ್ರತೆ ಒದಗಿಸುವುದು ಬಹಳ ಕಷ್ಟವಾಗಿರುತ್ತದೆ. ಪುರುಷರು ನಗ್ನರಾಗಿ ಓಡಾಡುವುದು ಅತ್ಯಂತ ಅಪಾಯಕಾಗಿ ಎಂದು ನಾಗಲಕ್ಷ್ಮೀಯವರು ಹೇಳಿದ್ದಾರೆ. 
ಪುರುಷರು ಯಾವ ರೀತಿಯ ಉಡುಗೆಯನ್ನು ತೊಡಗಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪುರುಷರು ಶಾರ್ಟ್ಸ್ ಹಾಗೂ ಟಿ-ಶರ್ಟ್ಸ್ ಗಳನ್ನು ಧರಿಸಬೇಕು. ಟ್ರ್ಯಾಕ್ ಪ್ಯಾಂಟ್ ಗಳನ್ನೂ ಕೂಡ ತೊಡಬಹುದು ಎಂದು ತಿಳಿಸಿದ್ದಾರೆ. 
ನಾಗಲಕ್ಷ್ಮೀಯವರ ಈ ಹೇಳಿಕೆಗೆ ಕೆಲ ಪುರುಷ ಬೆಂಬಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕುಮಾರ್ ಜಹ್ಗಿರ್ಧರ್ ಎಂಬುವವರು ಮಾತನಾಡಿ, ಡ್ರೆಸ್ ಕೋಡ್ ಮಾಡುವುದಾದರೆ, ಮಹಿಳೆ ಹಾಗೂ ಪುರುಷರಿಬ್ಬರಿಗೂ ಮಾಡಬೇಕು. ಬೀಚ್ ಗಳಲ್ಲಿ ಪುರುಷರೇ ಮಹಿಳೆಯರಿಗೆ ಬೆದರಿಕೆಯೆಂದು ಏಕೆ ತಿಳಿಯಬೇಕು? ಬೀಚ್ ಗಳಲ್ಲಿ ಮಹಿಳೆಯರೂ ಕೂಡ ತುಂಡುಡುಗೆ ತೊಡುತ್ತಿದ್ದು, ಅವರ ತುಂಡುಡುಗೆಗಳೂ ಕೂಡ ಪುರುಷರ ಗಮನವನ್ನು ಸೆಳೆಯುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. 
ಪುರುಷರಿಗೆ ಡ್ರೆಸ್ ಕೋಡ್ ರೂಪಿಸುವುದಕ್ಕೂ ಮೊದಲು ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅವುಗಳತ್ತ ನಾಗಲಕ್ಷ್ಮೀಯವರು ಗಮನ ಹರಿಸಬೇಕು. ಬೀಜ್ ಗಳಲ್ಲಿ ಪುರುಷರು ಸೂಟ್, ಸಫಾರಿಗಳನ್ನು ಧರಿಸಲು ಸಾಧ್ಯವಿಲ್ಲ. ಬೀಚ್ ಗಳು ಮೋಜು, ಮಸ್ತಿ ಮಾಡುವ ತಾಣವಾಗಿದೆ. ಬೀಜ್ ಗಳಲ್ಲಿ ಡ್ರೆಸ್ ಕೋಡ್ ರೂಪಿಸುವುದು ಸೂಕ್ತವಾದುದಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com