ಸರ್ಕಾರಕ್ಕೆ ವಂಚನೆ: ವಿಧಾನ ಪರಿಷತ್ ಸದಸ್ಯರ ವಿರುದ್ಧ ಪ್ರಕರಣ

ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸರ್ಕಾರಕ್ಕೆ ನಕಲಿ ಬಿಲ್ ನೀಡಿ ವಂಚಿಸಿದ ಪ್ರಕರಣದಲ್ಲಿ 8 ಮಂದಿ ವಿರುದ್ಧ ಎಫ್ ಐ ಆರ್ ...
ಕರ್ನಾಟಕ ವಿಧಾನ ಪರಿಷತ್
ಕರ್ನಾಟಕ ವಿಧಾನ ಪರಿಷತ್
ಬೆಂಗಳೂರು:  ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸರ್ಕಾರಕ್ಕೆ  ನಕಲಿ ಬಿಲ್ ನೀಡಿ ವಂಚಿಸಿದ ಪ್ರಕರಣದಲ್ಲಿ 8 ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಬಿಬಿಎಂಪಿ ಚುನಾವಣೆ ವೇಳೆ, ಕಾಂಗ್ರೆಸ್ ಅಭ್ಯರ್ಥಿಯನ್ನು ಮೇಯರ್‍ರನ್ನಾಗಿ ಆಯ್ಕೆ ಮಾಡುವ ಉದ್ದೇಶದಿಂದ ಈ 7 ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬರು ಮಾಜಿ ಸದಸ್ಯರು ತಮ್ಮ ವಿಳಾಸಗಳನ್ನು ಬೆಂಗಳೂರಿಗೆ ವರ್ಗಾಯಿಸಿಕೊಂಡು ಮತ ಚಲಾಯಿಸಿದ್ದರು.ಅವರುಗಳು 
ಆದರೆ, ಸರ್ಕಾರದಿಂದ ಪಡೆಯುವ ಟಿಎ, ಡಿಎಗೋಸ್ಕರ ವಿಧಾನಸೌಧದಲ್ಲಿ ತಮ್ಮ ಸ್ವಕ್ಷೇತ್ರದಿಂದಲೇ ಬೆಂಗಳೂರಿಗೆ ಪ್ರಯಾಣ ಮಾಡುತ್ತಿರುವುದಾಗಿ ವಂಚಿಸಿ ಲಕ್ಷಾಂತರ ರೂ.ಗಳನ್ನು ವಂಚಿಸಿದ್ದರು.
ವಿಧಾನಪರಿಷತ್ ಸದಸ್ಯರಾದ ಬೋಸರಾಜ್, ಲಕ್ಷ್ಮಿನಾರಾಯಣ್, ಅಲ್ಲಂ ವೀರಭದ್ರಪ್ಪ, ಅಪ್ಪಾಜಿಗೌಡ, ಎಸ್.ರವಿ, ಆರ್.ಬಿ.ತಿಮ್ಮಾಪುರ, ಸಿ.ಆರ್.ಮನೋಹರ್ ಹಾಗೂ ರಘು ಆಚಾರ್ ವಿರುದ್ದ ಕೇಸ್ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com