ಕುಡಿದು ಚಾಲನೆ ಮಾಡುವವರಿಗೆ ಬೆಂಗಳೂರು ಸಂಚಾರಿ ಪೊಲೀಸರು ಸಿಂಹಸ್ವಪ್ನ: ದಾಖಲೆ ಪ್ರಮಾಣದ ಡಿಎಲ್ ರದ್ದು!

ಕುಡಿದು ಚಾಲನೆ ಮಾಡುವವರಿಗೆ ಬೆಂಗಳೂರು ಸಂಚಾರಿ ಪೊಲೀಸರು ಸಿಂಹಸ್ವಪ್ನರಾಗಿದ್ದು ಈ ವರ್ಷ ದಾಖಲೆ ಪ್ರಮಾಣದಲ್ಲಿ ಕುಡಿದು ಚಾಲನೆ ಮಾಡಿದವರ ಡ್ರೈವಿಂಗ್ ಲೈಸನ್ಸ್ ಅನ್ನು ರದ್ದು ಮಾಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕುಡಿದು ಚಾಲನೆ ಮಾಡುವವರಿಗೆ ಬೆಂಗಳೂರು ಸಂಚಾರಿ ಪೊಲೀಸರು ಸಿಂಹಸ್ವಪ್ನರಾಗಿದ್ದು ಈ ವರ್ಷ ದಾಖಲೆ ಪ್ರಮಾಣದಲ್ಲಿ ಕುಡಿದು ಚಾಲನೆ ಮಾಡಿದವರ ಡ್ರೈವಿಂಗ್ ಲೈಸನ್ಸ್ ಅನ್ನು ರದ್ದು ಮಾಡಿದ್ದಾರೆ. 
2017-18ರಲ್ಲಿ ಸುಮಾರು 32,765 ಡ್ರೈವಿಂಗ್ ಲೈಸನ್ಸ್ ಗಳನ್ನು ರದ್ದು ಮಾಡಲಾಗಿದೆ. ಇದರ ಜೊತೆಗೆ ಬೇರೆ ಬೇರೆ ಪ್ರಕರಣಗಳ ಪೈಕಿ 8,369 ಮಂದಿಯ ಲೈಸನ್ಸ್ ಅನ್ನು ರದ್ದು ಮಾಡಲಾಗಿದ್ದು ಇದರಲ್ಲಿ ಅಧಿಕ ಪ್ರಕರಣಗಳು ನಗರದಲ್ಲಿ ನಡೆದಿದೆ ಎಂಬ ಮಾಹಿತಿ ಸಂಚಾರಿ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಬಹಿರಂಗಗೊಂಡಿದೆ. 
2016-17ರಲ್ಲಿ ಸಂಚಾರಿ ಪೊಲೀಸರು ಸುಮಾರು 14,881 ಮಂದಿಯ ಲೈಸನ್ಸ್ ರದ್ದು ಮಾಡಿದ್ದು ಈ ಬಾರಿ ಇದರ ಪ್ರಮಾಣ ದುಪ್ಪಟಾಗಿದೆ. ಕಳೆದ ಮಾರ್ಚ್ 31ರವರೆಗೂ ಕರ್ನಾಟಕದಾದ್ಯಂತ ಸುಮಾರು 42 ಸಾವಿರ ಲೈಸನ್ಸ್ ಅನ್ನು ರದ್ದು ಮಾಡಲಾಗಿದೆ. ಇದರಲ್ಲಿ ಶೇಖಡ 60ರಷ್ಟು ಲೈಸನ್ಸ್ ಗಳು ರದ್ದಾಗಿರುವುದು ಮದ್ಯ ಸೇವಿಸಿ ಚಾಲನೆ ಮಾಡಿದವರದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com