ಅಕ್ರಮ ಸಂಬಂಧ: ಮದುವೆಗೆ ನಿರಾಕರಿಸಿದ್ದಕ್ಕೆ ತಾಯಿ, ಮಗನನ್ನು ಹತ್ಯೆಗೈದ ಆರೋಪಿ

ವಿಜಯಪುರದಲ್ಲಿ ನಡೆದಿದ್ದ ತಾಯಿ, ಮಗನ ಅವಳಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಆರೋಪಿಯನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಜಯಪುರದಲ್ಲಿ ನಡೆದಿದ್ದ ತಾಯಿ, ಮಗನ ಅವಳಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಆರೋಪಿಯನ್ನು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. 
ಹತ್ಯೆಯಾದ ಮಹಿಳೆಯೊಂದಿಗೆ ಆರೋಪಿ ಅಕ್ರಮ ಸಂಬಂಧ ಹೊಂದಿದ್ದ. ಇದರಂತೆ ಪತಿಗೆ ವಿಚ್ಛೇದನ ನೀಡಿ ತನ್ನೊಂದಿಗೆ ವಿವಾಹವಾಗುವಂತೆ ಮಹಿಳೆಗೆ ಬಲವಂತ ಮಾಡಿದ್ದಾನೆ. ಇದಕ್ಕೆ ಮಹಿಳೆ ನಿರಾಕರಿಸಿದ ಹಿನ್ನೆಲೆಯಲ್ಲಿ ತೀವ್ರವಾಗಿ ಕೆಂಡಾಮಂಡಲಗೊಂಡಿರುವ ಆರೋಪಿ ಮಹಿಳೆ ಹಾಗೂ ಆಕೆಯ ಪುತ್ರನನ್ನು ಹತ್ಯೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ. 
ಹೇಮಂತ್ ಕುಮಾರ್ (28) ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದಾನೆ. ಆರೋಪಿ ಹೇಮಂತ್ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಿವಾಸಿಯಾಗಿದ್ದ, ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. 
ಶ್ರಾವಣಿ (26) ಹತ್ಯೆಯಾದ ಮಹಿಳೆಯಾಗಿದ್ದಾರೆ. ಶ್ರಾವಣಿಗೆ ಎರಡೂವರೆ ವರ್ಷದ ಸಾಯಿ ಮಾನಸ್ ಎಂಬ ಪುತ್ರನಿದ್ದ. ವಿಜಯಪುರ ಟೌನ್ ದೇವನಹಳ್ಳಿಯ ಮಂಡಿ ಬೆಲೆ ರಸ್ತೆಯಲ್ಲಿರುವ ಐಟ್ ಫ್ಯಾಕ್ಟರಿ ಬಳಿ ಶ್ರಾವಣಿ ಮನೆಯಿತ್ತು. 
ಎಂಎಸ್'ಸಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದ ಶ್ರಾವಣಿ ಹೆಸರಾಂತ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿರುವ ರಾಜೇಶ್ ಎಂಬುವವರೊಂದಿಗೆ ಶ್ರಾವಣಿ ವಿವಾಹವಾಗಿತ್ತು. ನ.19 ರಂದು ಶ್ರಾವಣಿ ಹಾಗೂ ಅವರ ಎರಡೂ ವರ್ಷದ ಮಗುವನ್ನು ಹತ್ಯೆ ಮಾಡಲಾಗಿತ್ತು. 
ಘಟನೆ ಕುರಿತು ಶ್ರಾವಣಿ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಮಗುವಿಗೆ ವಿಷ ಹಾಕಿ ಶ್ರಾವಣಿ ಆತ್ಮಹತ್ಯೆ ಮಾಡಿಕೊಡಿದ್ದಾಳೆಂದು ಹೇಳಿದ್ದರು. ಯಾರ ಮೇಲೂ ಸಂಶಯವನ್ನು ವ್ಯಕ್ತಪಡಿಸಿರಲಿಲ್ಲ. ಆದರೆ, ತನಿಖೆ ನಡೆಸಲು ಆರಂಭಿಸಿದ್ದ ಪೊಲೀಸರಿಗೆ ಹಲವು ಶಂಕೆಗಳು ಮೂಡಿದ್ದವು. ಶ್ರಾವಣಿ ಕುತ್ತಿಗೆಯಲ್ಲಿ ಸೀಳಿರುವ ಗುರುತುಗಳು ಪತ್ತೆಯಾಗಿದ್ದವು. 
ತನಿಖೆಯನ್ನು ಚುರುಕುಗೊಳಿಸಿದಾಗ ಶ್ರಾವಣಿ ಹೇಮಂತ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವುದು ಕಂಡು ಬಂದಿತ್ತು. ಇದರಂತೆ ಹೇಮಂತ್'ನನ್ನು ವಿಚಾರಣೆಗೊಳಪಡಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. 
ಕಾಲೇಜಿನಲ್ಲಿ ಶ್ರಾವಣಿ ಹಾಗೂ ಆರೋಪಿ ಸಹಪಾಠಿಗಲಾಗಿದ್ದು, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದವು. ಕೆಲ ವರ್ಷಗಳ ಬಳಿಕ ಇಬ್ಬರೂ ಬೇರಯವರನ್ನು ವಿವಾಹವಾಗಿದ್ದೆವು ಎಂದು ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com