ಬೇಜವಾಬ್ದಾರಿಯುತ ಸಂದೇಶ ಕಳುಹಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು !

ಗುಂಪು ಹಲ್ಲೆಯಂತಹ ಘಟನೆ ತಡೆಗಟ್ಟುವ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದ ಅನುಸಾರದಂತೆ ರಾಜ್ಯ ಪೊಲೀಸ್ ಇಲಾಖೆ ಆದೇಶವೊಂದು ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಗುಂಪು ಹಲ್ಲೆಯಂತಹ ಘಟನೆ ತಡೆಗಟ್ಟುವ ನಿಟ್ಟಿನಲ್ಲಿ ಜುಲೈ  ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದ ಅನುಸಾರದಂತೆ   ರಾಜ್ಯ ಪೊಲೀಸ್ ಇಲಾಖೆ ಆದೇಶವೊಂದು ಹೊರಡಿಸಿದೆ.

 ಈ ಆದೇಶದ ಪ್ರಕಾರ, ಗುಂಪು ಹಲ್ಲೆಗೆ ಪ್ರಚೋದಿಸುವಂತಹ ಬೇಜವಾಬ್ದಾರಿಯುತ ಸಂದೇಶ ಕಳುಹಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬಹುದಾಗಿದೆ.

 ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಈ ಆದೇಶ ಹೊರಡಿಸಿದ್ದು, ದ್ವೇಷ ಹರಡುವಂತಹ  ಅಥವಾ ಗುಂಪು ಹಲ್ಲೆಗೆ ಪ್ರಚೋದನೆ ನೀಡುವಂತಹ ವರದಿ ಬಗ್ಗೆ ನಿಗಾ ಇಡಲು ವಿಶೇಷ ಕಾರ್ಯ ಪಡೆ ರಚಿಸುವಂತೆ ಸ್ಥಾಪಿಸುವಂತೆ ನೊಡಲ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಲ್ಲದೇ ಎರಡು ವಾರಗಳೊಳಗೆ  ಇಂತಹ ಘಟನೆಗಳು ನಡೆದ  ಪ್ರದೇಶವನ್ನು  ಪತ್ತೆಹಚ್ಚುವಂತೆ ಸೂಚಿಸಲಾಗಿದೆ.

ಸಮಾಜ ವಿರೋಧಿಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಹಾಗೂ ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುವಂತೆ ಹೇಳಲಾಗಿದೆ.  ಇಂತಹ ಘಟನೆಗಳ ವಿಚಾರಣೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುವಂತೆ  ಹಾಗೂ  ಸಂತ್ರಸ್ತರ ಕುಟುಂಬ ಸದಸ್ಯರ ಮೇಲೆ ದೌರ್ಜನ್ಯ ನಡೆಯದಂತೆ ನೋಡಲ್  ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

 ವಾಟ್ಸಾಪ್ ನಲ್ಲಿ ಮಕ್ಕಳ ಕಳ್ಳರ ಬಗ್ಗೆ  ಹಬ್ಬಿದ ವದಂತಿಯಿಂದ  ಮೇ 23 ರಂದು ಚಾಮರಾಜಪೇಟೆ ಪೊಲೀಸ್ ಠಾಣೆಯ ಪೆನ್ಷನ್ ಮೊಹಲಾದಲ್ಲಿ ರಾಜಸ್ತಾನದ ಕಲುರಾಮ್ ಎಂಬವರನ್ನು  ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು.
ನಂತರ ಆತ  ಉದ್ಯೋಗ ಹುಡುಕಲು  ಬೆಂಗಳೂರಿಗೆ ಬಂದಿದ್ದ ಎಂಬ ವಿಚಾರ ತಿಳಿದುಬಂದಿತ್ತು.  ಇಂತಹದ್ದೇ ಘಟನೆ ರಾಜ್ಯದ ವಿವಿಧೆಡೆ ಮೇ ಹಾಗೂ ಜೂನ್ ತಿಂಗಳಲ್ಲಿ ನಡೆದಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com