ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ
ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ

ಸರ್ಕಾರಿ ನೌಕರರಿಗೆ ವಾರದಲ್ಲಿ ಕೇವಲ 5 ದಿನ ಮಾತ್ರ ಕೆಲಸ: ಸಿಎಂ ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ಮನವಿ

ರಾಜ್ಯ ಸರ್ಕಾರ ಕಚೇರಿಗಳಲ್ಲಿ 5 ದಿನಗಳ ವಾರ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರು ಸೋಮವಾರ ಶಿಫಾರಸು ಮಾಡಿದ್ದಾರೆ...
Published on
ಬೆಂಗಳೂರು: ರಾಜ್ಯ ಸರ್ಕಾರ ಕಚೇರಿಗಳಲ್ಲಿ 5 ದಿನಗಳ ವಾರ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆಯವರು ಸೋಮವಾರ ಶಿಫಾರಸು ಮಾಡಿದ್ದಾರೆ. 
ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಪ್ರಿಯಾಂಕ ಖರ್ಗೆಯವರು, ವಾರದಲ್ಲಿ 5 ದಿನಗಳು ಮಾತ್ರ ಕೆಲಸವನ್ನು ಜಾರಿ ಗೊಳಿಸಿ ನಷ್ಟವನ್ನು ಭರಿಸಲು ಸಾರ್ವಜನಿಕ ರಜೆಗಳನ್ನು ಕಡಿತಗೊಳಿಸುವಂತೆ ತಿಳಿಸಿದ್ದಾರೆ. ಮುಖ್ಯವಾಗಿ ಕರ್ನಾಟಕ ಸರ್ಕಾರ ನೇಮಿಸಿದ್ದ 6ನೇ ವೇತನ ಆಯೋಗ 5 ದಿನಗಳ ವಾರದ ಪದ್ಧತಿಯನ್ನು ರಾಜ್ಯದಲ್ಲಿಯೂ ಜಾರಿಗೆ ತರಬೇಕೆಂದು ಶಿಫಾರಸು ಮಾಡಿದ್ದಾರೆ. 
ರಾಜ್ಯ ಸರ್ಕಾರಿ ನೌಕರರೂ ಕೂಡ ಐದು ದಿನಗಳ ವಾರವನ್ನು ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಬಹಳಷ್ಟು ವರ್ಷಗಳಿಂದ ಐದು ದಿನಗಳ ವಾರದ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದೆ. ಕೆಲಸದ ವೇಳೆಯನ್ನು ಹೆಚ್ಚಿಸುವ ಮೂಲಕ ಸಮತೋಲನವನ್ನು ತರಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com