ಅನಾಥ ಮಗು ಉಳಿಸಿಕೊಳ್ಳಲು ಸಾಕು ತಾಯಿ ಪರದಾಟ: ಕೊನೆಗೂ ದಕ್ಕಿತು ಗೆಲುವು!
ರಾಜ್ಯ
ಅನಾಥ ಮಗು ಉಳಿಸಿಕೊಳ್ಳಲು ಸಾಕು ತಾಯಿ ಪರದಾಟ: ಕೊನೆಗೂ ದಕ್ಕಿತು ಗೆಲುವು!
7 ವರ್ಷಗಳ ಹಿಂದೆ ಸಿಕ್ಕ ಅನಾಥ ಹೆಣ್ಣು ನವಜಾತ ಶಿಶುವನ್ನು ಸಾಕಿದ್ದ ತಾಯಿಗೆ ಎದುರಾಗಿದ್ದ ಕಾನೂನು ತೊಡಲು ಇದೀಗ ನಿವಾರಣೆಯಾಗಿದ್ದು, ಕೊನೆಗೂ ಮಾತೆಯ ಮಮತೆಗೆ ಗೆಲವು ಸಿಕ್ಕಿದಂತಾಗಿದೆ...
ಕಲಬುರಗಿ: 7 ವರ್ಷಗಳ ಹಿಂದೆ ಸಿಕ್ಕ ಅನಾಥ ಹೆಣ್ಣು ನವಜಾತ ಶಿಶುವನ್ನು ಸಾಕಿದ್ದ ತಾಯಿಗೆ ಎದುರಾಗಿದ್ದ ಕಾನೂನು ತೊಡಲು ಇದೀಗ ನಿವಾರಣೆಯಾಗಿದ್ದು, ಕೊನೆಗೂ ಮಾತೆಯ ಮಮತೆಗೆ ಗೆಲವು ಸಿಕ್ಕಿದಂತಾಗಿದೆ.
2012ರಲ್ಲಿ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯ ಬಳಿ ಜಯಶ್ರೀ ಗುತ್ತೇದಾರ್ ಎಂಬುವವರಿಗೆ ನಜವಾತ ಹೆಣ್ಣು ಶಿಶು ದೊರಕಿತ್ತು. ಮಗವನ್ನು ಎತ್ತಿಕೊಂಡು ಮನೆಗೆ ಕರೆತಂದ ಜಯಶ್ರೀಯವರು ಹೆತ್ತ ಮಗಳಂತೆ ಮಗುವನ್ನು ಪಾಲಿಸಿ, ಪೋಷಿಸಿದ್ದರು.
ನಗರದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಾಲಕಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕೆಲ ತಿಂಗಳ ಹಿಂದೆ ಅನಧಿಕೃತವಾಗಿ ಮಗುವನ್ನು ಸಾಕಲಾಗುತ್ತಿದೆ ಎಂದು ಅನಾಮಧೇಯ ವ್ಯಕ್ತಿಗಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಇದರಂತೆ ಮಾಹಿತಿ ಪಡೆದ ಅಧಿಕಾರಿಗಳು ಮಗುವನ್ನು ಸರ್ಕಾರದ ವಶಕ್ಕೆ ನೀಡಬೇಕೆಂದು ಹೇಳಿದ್ದಾರೆ.
ಮಗಳನ್ನು ಉಳಿಸಿಕೊಳ್ಳಲು ಜಯಶ್ರೀಯವರು ಸಾಕಷ್ಟು ಸಮಸ್ಯೆಗಳ ಹಾಗೂ ಸಂಕಷ್ಟಗಳನ್ನು ಎದುರುವಂತಾಗಿದೆ. ಬಳಿಕ ಕುಟುಂಬಸ್ಥರು ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಂದಿದ್ದರು. ಬಳಿಕ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಇದೀಗ ಸಚಿವರ ಸೂಚನೆಯಂತೆಯೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಎಸ್'ಪಿ. ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸ್ ಭವನದಲ್ಲಿ ಸಭೆ ನಡೆಸಿದ ಬಳಿಕ ಮಗುವನ್ನು ಸಾಕು ತಾತಿಯ ಹತ್ತಿರವೇ ಬಿಡಲು ನಿರ್ಧರಿಸಿ, ಕಾನೂನು ಪ್ರಕ್ರಿಯೆ ಮುಗಿಸಿದ್ದಾರೆ
ಕೊನೆಗೂ ಹೋರಾಟದಲ್ಲಿ ಜಯ ಗಳಿಸಿದ ಜಯಶ್ರೀಯವರು ಬಾಲಕಿಯ ಜನ್ಮದಿನವನ್ನಾಚರಿಸಿ ಸಂಭ್ರಮಿಸಿದ್ದಾರೆ. ಮಗಳನ್ನು ನಾನು ಹೆತ್ತ ಮಗಳಂತೆಯೇ ನೋಡಿಕೊಂಡಿದ್ದೇನೆ. ಖಾಸಗಿ ಶಾಲೆಯಲ್ಲಿ ಆಕೆಯನ್ನು ಸೇರ್ಪಡೆಗೊಳಿಸಿದ್ದೇನೆ. ಈಗಾಗಲೇ ಆಕೆಗೆ ಆಧಾರ್ ಕಾರ್ಡ್ ಹಾಗೂ ಎಲ್ಐಸಿಯನ್ನೂ ಮಾಡಿಸಿದ್ದೇನೆ. ನಮ್ಮ ಆಸ್ತಿಯಲ್ಲಿ ಆಕೆಗೆ ಪಾಲು ನೀಡುವ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ಆದರೆ, ಸಿಡಬ್ಲ್ಯೂಸಿ ತಮ್ಮ ವಶಕ್ಕೆ ನೀಡಬೇಕೆಂದು ತಿಳಿಸಿದ್ದರಿಂದ ಕಾನೂನು ಹೋರಾಟ ನಡೆಸಬೇಕಾಯಿತು. ಕೊನೆಗೂ ಮಾನವೀಯತೆ ಗೆದ್ದಿತು ಎಂದು ಜಯಶ್ರೀಯವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ