ಬೆಂಗಳೂರು: ಹೆದ್ದಾರಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯ ಜೀವ ಉಳಿಸಲು ಉದ್ಯಮಿಯ ಹರಸಾಹಸ!

: ಕೆ.ಆರ್ ಪುರಂ ಸಮೀಪದ ಮಡೆಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯ ಜೀವ ರಕ್ಷಿಸಲು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬ..
ಜೀವ ರಕ್ಷಿಸಿದ ಬಾಲಾಜಿ
ಜೀವ ರಕ್ಷಿಸಿದ ಬಾಲಾಜಿ
ಬೆಂಗಳೂರು: ಕೆ.ಆರ್ ಪುರಂ ಸಮೀಪದ ಮಡೆಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯ ಜೀವ ರಕ್ಷಿಸಲು ರಿಯಲ್ ಎಸ್ಟೇಟ್ ಉದ್ಯಮಿ ಬಾಲಾಜಿ ಪ್ರಯತ್ನಿಸಿದ್ದಾರೆ.
ಮೊದಲಿಗೆ ಹಿಟ್ ಅಂಡ್ ರನ್ ಕೇಸ್ ಎಂದು ಶಂಕಿಸಲಾಯಿತು, ಅನಂತರ ಕುಡಿದು ಬಿದ್ದಿರುವುದು ಎಂಬುದಾಗಿ ತಿಳಿಯಿತು..
ಸೆಪ್ಟಂಬರ್  19 ರಂದು ಮುರುಗೇಶ್ ಪಾಳ್ಯದ ಗೌತಮ್ ರಾತ್ರಿ 7.30ರ ವೇಳೆಗೆ ಹೆದ್ದಾರಿಯಲ್ಲಿ ಕುಡಿದ ಮತ್ತಿನಲ್ಲಿ ರಸ್ತೆ ದಾಟುತ್ತಿದ್ದರು, ಈ ವೇಳೆ ಬ್ಯಾಲೆನ್ಸ್ ಕಳೆದುಕೊಂಡು ರಸ್ತೆ ಮೇಲೆ ಬಿದ್ದರು ಇದನ್ನು ಗಮನಿಸಿದ ಪಾದಚಾರಿಯೊಬ್ಬರು ವಾಹನಗಳನ್ನು ತಡೆದು ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ
ಆರಂಭದಲ್ಲಿ ಯಾರೊಬ್ಬರು ತಮ್ಮ ವಾಹನ ನಿಲ್ಲಿಸಲಿಲ್ಲ, ನಂತರ  ಗೂಡ್ಸ್ ಆಟೋವೊಂದರಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು, ಅದಾದ ನಂತರ ಗೌತಮ್ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ನಿಮ್ಹಾನ್ಸ್ ನಿಂದ ಡಿಸ್ಚಾರ್ಜ್ ಆಗಿರುವ ಗೌತಮ್ ತಮ್ಮ ಹೇಳಿಕೆ ನೀಡಿದ್ದಾರೆ, ಕುಡಿದ ಮತ್ತಿನಲ್ಲಿ ರಸ್ತೆ ದಾಟುವಾಗ ತಾವು ಬಿದ್ದಿದ್ದಾಗಿ ತಿಳಿಸಿದ್ದಾರೆ.
ನನ್ನ ಉದ್ದೇಶ ಜೀವವನ್ನು ರಕ್ಷಿಸುವುದಾಗಿತ್ತು, ಆತ ಅಪಘಾತಕ್ಕೊಳಗಾಗಿರಲಿ ಅಥವಾ ಮದ್ಯ ಸೇವಿಸಿ ಬಿದ್ದಿದ್ದೇ ಆಗಿರಲಿ, ಆತ ಬದುಕಿದಾಗ ನನಗೆ ತುಂಬಾ ಸಂತೋಷವಾಯಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ನೋಡಿ ಗಾಬರಿಯಾಗಿ ಆ್ಯಂಬುಲೆನ್ಸ್ ಗೆ ಕರೆ ಮಾಡಲು ಯೋಚಿಸಿದೆ, ಆದರೆ ಅದು ಬರುವುದು ಮತ್ತಷ್ಟು ತಡವಾಗುವುದೆಂದು ತಿಳಿದು, ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸಿದೆ, ರಸ್ತೆಯಲ್ಲಿ ಯಾರಾದರೂ ಗಾಯಗೊಂಡು ಬಿದ್ದಿದ್ದರೇ ಏಕೆ ಯಾರೋಬ್ಬರು ಅವರನ್ನು ರಕ್ಷಿಸಲು ಮುಂದೆ ಬರುವುದಿಲ್ಲ ಎಂಬುದು ಇನ್ನು ನನಗೆ ಅರ್ಥವಾಗುತ್ತಿಲ್ಲ ಬಾಲಾಜಿ  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com