ಅಪಘಾತವಾಗಿ ಬೆನ್ನು ಮೂಳೆ ಮುರಿದಿದ್ದರು ಘೀಳಿಡುತ್ತಾ ಬಸ್ಸಿಗೆ ಗುದ್ದಿ ಸೇಡು ತೀರಿಸಿಕೊಂಡಿದ್ದ ರೌಡಿ ರಂಗ!

ಖಾಸಗಿ ಬಸ್ಸೊಂದು ಗುದ್ದಿ ಗಂಭೀರವಾಗಿ ಗಾಯಗೊಂಡಿದ್ದ ರಂಗ ಆನೆ ಮೃತಪಟ್ಟಿದ್ದು ಮತ್ತಿಗೋಡು ಅರಣ್ಯದಲ್ಲಿ ಸಂಜೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು...
ರಂಗ ಆನೆ-ಬಸ್
ರಂಗ ಆನೆ-ಬಸ್
Updated on
ಮಡಿಕೇರಿ: ಖಾಸಗಿ ಬಸ್ಸೊಂದು ಗುದ್ದಿ ಗಂಭೀರವಾಗಿ ಗಾಯಗೊಂಡಿದ್ದ ರಂಗ ಆನೆ ಮೃತಪಟ್ಟಿದ್ದು ಮತ್ತಿಗೋಡು ಅರಣ್ಯದಲ್ಲಿ ಸಂಜೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಇದೀಗ ರಂಗನ ಕುರಿತು ಹಲವು ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಬಸ್ ನಲ್ಲಿದ್ದ ಹಲವರು ಘಟನೆಯ ಕುರಿತಂತೆ ಹೇಳಿಕೊಂಡಿದ್ದಾರೆ. 
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಲ್ಪಕ ಟ್ರಾವೆಲ್ಸ್ ಗೆ ಸೇರಿದ ಸ್ಲೀಪರ್ ಕೋಚ್ ಬಸ್ ಮೇಯಲು ಹೋಗಿದ್ದ ರಂಗ ಆನೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆನೆ ರಸ್ತೆ ಬದಿಯಲ್ಲಿ ಕುಸಿದು ಬಿದ್ದಿದ್ದ. ರಂಗನ ಹೊಟ್ಟೆ ಭಾಗಕ್ಕೆ ಬಸ್ ಗುದ್ದಿದ್ದರಿಂದ ರಂಗನ ಬೆನ್ನು ಹುರಿ ತುಂಡಾಗಿ, ಬೆನ್ನು ಛಿದ್ರವಾಗಿ ತೆರೆದುಕೊಂಡು ರಕ್ತಸ್ರಾವವಾಗಿದೆ. 
ಆದರೆ ರಂಗ ಆ ತಕ್ಷಣದಲ್ಲಿ ನಿಯಂತ್ರಣ ಕಳೆದುಕೊಂಡಿಲ್ಲ. ನಿತ್ರಾಣಗೊಂಡಿದ್ದರೂ ತನಗೆ ಗುದ್ದಿಗ ಬಸ್ ನ ಎಡಬದಿಗೆ ತೆರಳಿ ತನ್ನ ಬಲವಾದ ಕೊರೆಗಳ ಮೂಲಕ ಬಸ್ ಗೆ ಗುದ್ದಿದ್ದ. ಕೊರೆ ಚುಚ್ಚಿದ ಗುರುತು ಬಸ್ ಮೇಲಿದೆ. ಬಳಿಕ ನೋವು ತಾಳಲಾರದೆ ಜೋರಾಗಿ ಘೀಳಿಡುತ್ತಾ ರಸ್ತೆಯ ಮತ್ತೊಂದು ಬದಿ ಕುಸಿದು ಬಿದ್ದಿದ್ದಾನೆ ರಂಗ. ಸುಮಾರು ಗಂಟೆಗಳ ಕಾಲ ನೋವು ಅನುಭವಿಸಿದ ರಂಗ ಬೆಳಗ್ಗೆ 6 ಗಂಟೆ ಸುಮಾರಿಗೆ ಪ್ರಾಣ ಬಿಟ್ಟಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com