ಆನೆ ಶಿಬಿರಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ: ವನ್ಯಜೀವಿ ಕಾರ್ಯಕರ್ತರು ಆಗ್ರಹ

ಆನೆ ಶಿಬಿರಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಹಲವು ವರ್ಷಗಳಿಂದಲೂ ಆಗ್ರಹಗಳು ಕೇಳಿ ಬಂದಿದ್ದು, ಇದೀಗ ದಸರಾ ಆನೆ ರಂಗನ ಸಾವಿನ ಬಳಿಕ ಈ ದನಿ ಮತ್ತಷ್ಟು ಪ್ರಬಲಗೊಂಡಿದೆ...
ದಸರಾ ಆನೆ ರಂಗ ಅಪಘಾತದಲ್ಲಿ ಸಾವು
ದಸರಾ ಆನೆ ರಂಗ ಅಪಘಾತದಲ್ಲಿ ಸಾವು
ಹುಬ್ಬಳ್ಳಿ: ಆನೆ ಶಿಬಿರಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಹಲವು ವರ್ಷಗಳಿಂದಲೂ ಆಗ್ರಹಗಳು ಕೇಳಿ ಬಂದಿದ್ದು, ಇದೀಗ ದಸರಾ ಆನೆ ರಂಗನ ಸಾವಿನ ಬಳಿಕ ಈ ದನಿ ಮತ್ತಷ್ಟು ಪ್ರಬಲಗೊಂಡಿದೆ. 
ಕರ್ನಾಟಕ 130 ಆನೆಗಳನ್ನು ವಿವಿಧ ಶಿಬಿರಗಳಿಗೆ ಕಳುಹಿಸಲಾಗಿದೆ. 8 ಶಿಬಿರಗಳ ಪೈಕಿ 6 ಶಿಬಿರಗಳು ಬಂಡೀಪುರ, ನಾಗರಹೊಳೆ ಹಾಗೂ ಬಿಆರ್'ಟಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿವೆ. ಇವು ಪ್ರಾಣಿಗಳಿಗೆ ಸುರಕ್ಷಿತ ಪ್ರದೇಶಗಳಲ್ಲ ಎಂಬುದು ವನ್ಯಜೀವಿ ಕಾರ್ಯಕರ್ತರ ಅಭಿಪ್ರಾಯವಾಗಿದೆ. 
ವನ್ಯಜೀವಿ ಪ್ರದೇಶಗಳಲ್ಲಿ ಆನೆ ಶಿಬಿರಗಳಿರುವುದು ಋಣಾತ್ಮಕ ಪರಿಣಾಮಗಳನ್ನು ಬೀರುತ್ತಿವೆ. ಪರಿಸ್ಥಿತಿ ಗಂಭೀರವಾಗಿದ್ದರೂ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬಸ್ಥರು ಅನುಕೂಲವಾಗುವ ಸಲುವಾಗಿ ಶಿಬಿರಗಳನ್ನು ಹತ್ತಿರವೇ ಮಾಡಲಾಗುತ್ತಿದೆ. ರಾಷ್ಟ್ರೀಯ ಉದ್ಯಾನವನದಲ್ಲಿ ಹೊಸ ಆನೆ ರಕ್ಷಣಾ ಕೇಂದ್ರಗಳನ್ನು ಸ್ಥಾಪನೆ ಮಾಡಬಾರದು ಎಂಬುದು ಕಡ್ಡಾಯವಾಗಿದೆ. ಪ್ರಸ್ತುತ ಇರುವ ಶಿಬಿರಗಳನ್ನು ಪಶುವೈದ್ಯ ಸೌಲಭ್ಯಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಬೇಕೆಂದು ವೈಲ್ಡ್ ಲೈಫ್ ಫರ್ಸ್ಟ್ ಟ್ರಸ್ಟೀ ಪ್ರವೀನ್ ಭಾರ್ಗವ್ ಅವರು ಹೇಳಿದ್ದಾರೆ.
ಹಲವು ವರ್ಷಗಳಿಂದಲೂ ಅರಣ್ಯ ಪ್ರದೇಶದೊಳಗೆ ಆನೆ ಶಿಬಿರಗಳಿರುವುದಕ್ಕೆ ಪ್ರಾಣಿ ಸಂರಕ್ಷಕ ಕೆ.ಎಂ. ಚಿನ್ನಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಪ್ರಾಣಿ ಸಂರಕ್ಷಿತ ಪ್ರದೇಶಗಳಲ್ಲಿ ಮರ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪ್ರಸ್ತುತ ಬುಡಕಟ್ಟು ಜನಾಂಗದವರು ಸೇರಿಕೊಂಡಿರುವ ಸ್ಥಳಗಳು ಆನೆ ಶಿಬಿರಗಳಾಗಿತ್ತು. ಒಂದೆಡೆ ಇಲಾಖೆ ಬುಡಕಟ್ಟು ಜನರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದರೆ, ಮತ್ತೊಂದೆಡೆ ಅರಣ್ಯದಲ್ಲಿ ಮನುಷ್ಯರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com