ಎಚ್‌ಎಎಲ್‌ ಗೆ ರಾಹುಲ್ ಭೇಟಿ: ತನ್ನ ಉದ್ಯೋಗಿಗಳ ರಾಜಕೀಯಕ್ಕೆ ವೈಮಾನಿಕ ಸಂಸ್ಥೆ ವಿಷಾದ

ರಾಫೆಲ್ ವಿವಾದದ ಹಿನ್ನೆಲೆಯಲ್ಲಿ ಎಚ್ಎಎಲ್ ಹಾಲಿ ಹಾಗೂ ಮಾಜಿ ಉದ್ಯೋಗಿಗಳೊಡನೆ ರಾಹುಲ್ ಗಾಂಧಿ ನಡೆಸಿದ ಸಂವಾದ ಕಾರ್ಯಕ್ರಮದ ಬಳಿಕ ರಾಜ್ಯ ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ......
ಎಚ್‌ಎಎಲ್‌ ಗೆ ರಾಹುಲ್ ಭೇಟಿ
ಎಚ್‌ಎಎಲ್‌ ಗೆ ರಾಹುಲ್ ಭೇಟಿ
Updated on: 
ಬೆಂಗಳೂರು: ರಾಫೆಲ್ ವಿವಾದದ ಹಿನ್ನೆಲೆಯಲ್ಲಿ ಎಚ್ಎಎಲ್ ಹಾಲಿ ಹಾಗೂ ಮಾಜಿ ಉದ್ಯೋಗಿಗಳೊಡನೆ ರಾಹುಲ್ ಗಾಂಧಿ ನಡೆಸಿದ ಸಂವಾದ ಕಾರ್ಯಕ್ರಮದ ಬಳಿಕ ರಾಜ್ಯ ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ ತನ್ನ ಉದ್ಯೋಗಿಗಳ ರಾಜಕೀಯವನ್ನು ಕುರಿತು ವಿಷಾದ ವ್ಯಕ್ತಪಡಿಸಿದೆ. ಅಲ್ಲದೆ ಇದು ರಾಷ್ಟ್ರೀಯ ಭದ್ರತೆ ಮತ್ತು ಐಕ್ಯತೆಗೆ ಮಾರಕವಾಗಿರುವ ವಿಷಾದಕರ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಎಚ್ಎಎಲ್ ಉದ್ಯೋಗಿಗಳೊಡನೆ ರಾಹುಲ್ ಗಾಂಧಿ ನಡೆಸಿದ ಸಂವಾದವನ್ನು ಉಲ್ಲೇಖಿಸದೆ ಸಂಸ್ಥೆ ಈ ಹೇಳಿಕೆ ನೀಡಿದೆ. 
ಇಂದು ಬೆಂಗಳೂರಿಗೆ ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನಗರದ ಮಿನ್ಸ್ಕ್ ಸ್ಕ್ವೇರ್ ಬಳಿ ಎಚ್ಎಎಲ್ ನಿವೃತ್ತ ನೌಕರರ ಜೊತೆ ಸಂವಾದ ನಡೆಸಿದ್ದರು. ಈ ವೇಳೆ ಅವರು ಆಧುನಿಕ ಬಾರತದ ದೇವಾಲಯಗಳು ದಾಳಿಗೊಳಗಾಗುತ್ತಿದೆ ಎಂದು ಆರೋಪಿಸಿದ್ದರು.
2014-18ರ ಅವಧಿಯಲ್ಲಿ ಎನ್ ಡಿಎ ಸರ್ಕಾರವು ಎಚ್ಎಎಲ್ ಸಾಮರ್ಥ್ಯ ಗುರುತಿಸಿ 27,340 ಕೋಟಿ ರೂ.ಗಳ ಪೂರೈಕೆ ಆದೇಶ (ಸಪ್ಲೆ ಆರ್ಡರ್) ಗೆ ಪೂರ್ಣ ಸಮ್ಮತಿ ಸೂಚಿಸಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಮೂಲಭೂತ ಸೌಕರ್ಯಗಳ ಸುಧಾರಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ಪಾದನಾ ಸೌಲಭ್ಯಗಳನ್ನು ಉನ್ನತ ಮಟ್ಟಕ್ಕೇರಿಸಲು ಸೇರಿದಂತೆ ವಿವಿಧ ಉದ್ದೇಅಗಳಿಗೆ  7,800 ಕೋಟಿ ರೂ. ಹಣವನ್ನು ಈ ಅವಧಿಯಲ್ಲಿ ಅನುಮೋದನೆ ಒದಗಿಸಿದೆ ಎಂದು ಅವರು ಹೇಳಿದ್ದಾರೆ. 
ರಕ್ಷಣೆ ಹಾಗೂ ವಾಯುಯಾನ ಉದ್ಯಮ ವಲಯದಲ್ಲಿ ಎಚ್ಎಎಲ್ ತನ್ನ ಸ್ಥಾನವನ್ನು ಹೆಮ್ಮೆಯಿಂದ ಗುರುತಿಸಿಕೊಳ್ಳುತ್ತದೆ.ಸಂಸ್ಥೆ ಇದುವರೆಗೂ ರಾಷ್ಟ್ರ-ನಿರ್ಮಾಣ ಪ್ರಕ್ರಿಯೆಗೆ ಅಪಾರ ಕೊಡುಗೆ ನೀಡಿದೆ ಎಂದು ಅವರು ಹೇಳಿದ್ದಾರೆ.
"ಉದ್ಯೋಗಿಗಳ ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಇಂದಿನ ಪ್ರಯತ್ನ ದುಃಖ ಮತ್ತು ವಿಷಾದನೀಯ ಬೆಳವಣಿಗೆಯಾಗಿದ್ದು, ಇದರಿಂದ ಸಂಸ್ಥೆಯ ಮೂಲ ಹಿತಾಸಕ್ತಿಯಾದ ರಾಷ್ಟ್ರೀಯ ಭದ್ತರೆ ಹಾಗೂ ಸಂಘಟನೆಯ ಕಾರ್ಯಗಳಿಗೆ ಹಾನಿಕರವಾಗಲಿದೆ" ಎಂದು ಎಚ್ಎಎಲ್ ಅಧಿಕಾರಿ ಪಿಟಿಐಗೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com