ರಜಾ ಪ್ರವಾಸಕ್ಕಾಗಿ ಮನೆ ಬಿಟ್ಟು ಹೋಗುತ್ತಿದ್ದೀರಾ? ಕಳ್ಳತನ ತಪ್ಪಿಸಲು ಈ ಕ್ರಮಗಳನ್ನು ಪಾಲಿಸಿ

ಮನೆಗಳನ್ನು ಟಾರ್ಗೆಟ್ ಮಾಡಿ, ಅಲ್ಲಿರುವವರ ಚಲನವಲನಗಳನ್ನು ಗಮನಿಸಿ ಯೋಜನಾಬದ್ಧವಾಗಿ ಮನೆಗಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ರಜಾ ಪ್ರವಾಸಕ್ಕಾಗಿ ಮನೆ ಬಿಟ್ಟು ಹೋಗುತ್ತಿದ್ದೀರಾ? ಕಳ್ಳತನ ತಪ್ಪಿಸಲು ಈ ಕ್ರಮಗಳನ್ನು ಪಾಲಿಸಿ
ರಜಾ ಪ್ರವಾಸಕ್ಕಾಗಿ ಮನೆ ಬಿಟ್ಟು ಹೋಗುತ್ತಿದ್ದೀರಾ? ಕಳ್ಳತನ ತಪ್ಪಿಸಲು ಈ ಕ್ರಮಗಳನ್ನು ಪಾಲಿಸಿ
Updated on
ಮನೆಗಳನ್ನು ಟಾರ್ಗೆಟ್ ಮಾಡಿ, ಅಲ್ಲಿರುವವರ ಚಲನವಲನಗಳನ್ನು ಗಮನಿಸಿ ಯೋಜನಾಬದ್ಧವಾಗಿ ಮನೆಗಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇಂತಹ ಘಟನೆಗಳು ಆತಂಕ ಮೂಡಿಸುತ್ತಿದ್ದು ಮನೆ ಮಂದಿಯೆಲ್ಲಾ ರಜಾ ಪ್ರವಾಸಕ್ಕಾಗಿ ಮನೆ ಬಿಟ್ಟು ಹೋಗುವಂತೆಯೂ ಇಲ್ಲ ಎಂಬ ಬೇಸರ ಇತ್ತೀಚಿನ ದಶಗಳಲ್ಲಿ ಕುಟುಂಬ ಸದಸ್ಯರನ್ನು ಕಾಡುವುದು ಸಾಮಾನ್ಯವಾಗಿಬಿಟ್ಟಿದೆ. 
ಮನೆಯಲ್ಲಿ ಯಾರಾದರೂ ಇದ್ದರೇನೆ ದೋಚದೇ ಬಿಡೋದಿಲ್ಲ ಇನ್ನು ಮನೆಯಲ್ಲಿ ಯಾರೂ ಇಲ್ಲದೇ ಹೋದರೆ ಪರಿಸ್ಥಿತಿ ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಾದರೆ ಕಳ್ಳತನವನ್ನು ತಪ್ಪಿಸುವುದಕ್ಕೆ ಈ ಕ್ರಮಗಳನ್ನು ಅನುಸರಿಸಿ. 
  1. ಒಂದಕ್ಕಿಂತ ಹೆಚ್ಚು ಲಾಕ್ ಗಳನ್ನು ಅಳವಡಿಸಿ
  2. ಮನೆಗೆ ವಾಪಸ್ ಬರುವವರೆಗೂ ಹಾಲು ಮತ್ತು ನ್ಯೂಸ್ ಪೇಪರ್ ನ ಪೂರೈಕೆಯನ್ನು ಸ್ಥಗಿತಗೊಳಿಸಿ 
  3. ಮನೆಯ ಮೇಲೆ ಗಮನವಿರಿಸುವಂತೆ ನೆರೆಯವರಿಗೆ ಮನವಿ ಮಾಡಿ 
  4. ಮನೆಯಿಂದ ಹೊರಡುವಾಗ ಕಿಟಕಿಗಳನ್ನು ಬಂದ್ ಮಾಡಿರುವುದನ್ನು ಖಾತ್ರಿಪಡಿಸಿಕೊಳ್ಳಿ 
  5. ರಜೆ ಪ್ರವಾಸದ ಮಾಹಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ಹಂಚಿಕೊಳ್ಳಬೇಡಿ 
  6. ಸಂಜೆ ವೇಳೆ ಮನೆಯಲ್ಲಿನ ದೀಪ (ಲೈಟ್) ಹಾಕುವಂತೆ ನೆರೆಯ ಮನೆಯವರಲ್ಲಿ ಹೇಳಿ 
  7. ಎಲೆಟ್ರಿಕಲ್ ಉಪಕರಣಗಳನ್ನು ಆಫ್ ಮಾಡಿ 
  8. ಸಿಸಿಟಿವಿ ಕ್ಯಾಮರಗಾಳನ್ನು  ಅಳವಡಿಸಿ 
  9. ಬೆಲೆಬಾಳುವ ಪದಾರ್ಥಗಳನ್ನು ಬ್ಯಾಂಕ್ ಲಾಕರ್ ನಲ್ಲಿರಿಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com