ಗೋಲ ಗುಮ್ಮಟದ ಗೋಡೆಗಳ ಮೇಲೆ ಉಗುಳುವ ಪ್ರವಾಸಿಗರು: ಸ್ಮಾರಕ ರಕ್ಷಣೆಗೆ ಭದ್ರತಾ ಪಡೆ ನಿಯೋಜನೆ

ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ಗೋಲ ಗುಮ್ಮಟಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ಗೋಡೆಗಳ ಮೇಲೆ ಉಗುಳುತ್ತಿದ್ದು, ಇದನ್ನು ನಿಯಂತ್ರಿಸುವುದು ಅಧಿಕಾರಿಗಳಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ...
ಗೋಲ ಗುಮ್ಮಟ
ಗೋಲ ಗುಮ್ಮಟ
Updated on
ವಿಜಯಪುರ: ವಿಶ್ವದ ಅದ್ಭುತಗಳಲ್ಲಿ ಒಂದಾಗಿರುವ ಗೋಲ ಗುಮ್ಮಟಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ಗೋಡೆಗಳ ಮೇಲೆ ಉಗುಳುತ್ತಿದ್ದು, ಇದನ್ನು ನಿಯಂತ್ರಿಸುವುದು ಅಧಿಕಾರಿಗಳಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 
ಗೋಲ ಗಮ್ಮಟದ ಒಳಗೆ ಪ್ರವೇಶಿಸುವ ಪ್ರವಾಸಿಗರು ಗುಟ್ಕಾ ಹಾಗೂ ತಂಬಾಕುಗಳನ್ನು ಹಾಕಿಕೊಂಡು ಗೋಡೆಗಳ ಮೇಲೆ ಉಗಿಯುತ್ತಿದ್ದಾರೆ. ಹೀಗಾಗಿ ಇದನ್ನು ತಡೆಯುವ ಸಲುವಾಗಿ ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಅಧಿಕಾರಿಗಳು ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ. 
ಗೋಲಗುಮ್ಮಟದ ಮುಂಭಾಗದಲ್ಲಿ ಇಬ್ಬರು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಭದ್ರತಾ ಪಡೆಗಳು ಪ್ರವಾಸಿಗರನ್ನು ಒಳ ಬಿಡುವುದಕ್ಕೂ ಮುನ್ನ ತಪಾಸಣೆ ನಡೆಸುತ್ತಾರೆ. ತಪಾಸಣೆ ವೇಳೆ ಪ್ರವಾಸಿಗರು ತಂಬಾಕು ಸೇವಿಸುತ್ತಿದ್ದರೆ ಅಥವಾ ತಂಬಾಕು ವಸ್ತುಗಳನ್ನು ಜೇಬಿನಲ್ಲಿಟ್ಟುಕೊಂಡು ಒಳ ಹೋಗುವವರನ್ನು ನಿಯಂತ್ರಿಸುತ್ತಾರೆ. ತಂಬಾಕು ಸೇವನೆ ಮಾಡುತ್ತಿರುವವರು ಬಾಯಿ ತೊಳೆದುಕೊಂಡು ಬಂದ ನಂತರವಷ್ಟೇ ಗೋಲ ಗುಮ್ಮಟದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. 
ಒಳ ಉಡುಪುಗಳೊಳಗೆ ಪ್ರವಾಸಿಗರು ಗುಟ್ಕಾ ಹಾಗೂ ತಂಬಾಕು ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಗೋಲ ಗುಮ್ಮಟದೊಳಗೆ ಪ್ರವೇಶ ಮಾಡಿದ ಬಳಿಕ ಬಾಯಿಗೆ ಹಾಕಿಕೊಂಡು ಗೋಡೆಗಳ ಮೇಲೆ ಉಗಿಯುತ್ತಿದ್ದಾರೆ. ಇದು ಗೋಲ ಗುಮ್ಮಟದ ಆಕರ್ಷಣೆಯನ್ನು ನಾಶ ಮಾಡುತ್ತಿದೆ. ಹೀಗಾಗಿ ಭದ್ರತಾ ಪಡೆಗಳನ್ನು ಒಳಗೆ ಹಾಗೂ ಹೊರಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರತಿನಿತ್ಯ ಇಂತಹದ್ದೇ 150ಕ್ಕೂ ಹೆಚ್ಚು ಪ್ರಕರಣಗಳು ನಡೆಯುತ್ತಿರುತ್ತವೆ. ತಪಾಸಣೆ ವೇಳೆ ಒಂದು ವೇಳೆ ಭದ್ರತಾ ಪಡೆಗಳ ಕರ್ತವ್ಯಕ್ತೆ ಅಡ್ಡಿಪಡಿಸಿದರೆ ಅಂತಹವರನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಲಾಗುತ್ತದೆ. ಈಗಾಗಲೇ ಹಲವು ಯುವಕರನ್ನು ಪೊಲೀಸರ ವಶಕ್ಕೆ ಕನೀಡಲಾಗಿದೆ. ಮತ್ತೆ ಈ ರೀತಿಯ ತಪ್ಪುಗಳು ಮಾಡದಂತೆ ಎಚ್ಚರಿಸಿ ಬಿಡುಗದೆ ಮಾಡಿದ್ದಾರೆಂದು ಹೇಳಿದ್ದಾರೆ. 
ಇದೀಗ ಅಧಿಕಾರಿಗಳು ಗೋಲ ಗುಮ್ಮಟದ ಗೋಡೆಗಳಿಗೆ ಬಣ್ಣಗಳನ್ನು ಹೊಡೆಯುತ್ತಿದ್ದು, ಮತ್ತೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ. 
ಗೋಲ ಗಮ್ಮಟದ ಪ್ರಾಮುಖ್ಯತೆ ಹಾಗೂ ಅದರ ರಕ್ಷಣೆ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಭಾರತೀಯ ಪುರಾತತ್ವದ ಅಧಿಕಾರಿಗಳು ಹೇಳಿದ್ದಾರೆ. 
ವಿಶ್ವವಿಖ್ಯಾತ ಗುಮ್ಮಟದ ಮೇಲೆ ಪ್ರವಾಸಿಗರು ಉಗುಳುತ್ತಿರುವುದು ಕೇಳಿ ಬಹಳ ಬೇಸರವಾಗುತ್ತಿದೆ. ಇಂತಹ ವರ್ತನೆಗಳನ್ನು ಒಪ್ಪಲು ಸಾಧ್ಯವಿಲ್ಲ. ಅಧಿಕಾರಿಗಳು ಕ್ರಮ ಕೈಗೊಂಡು ಭದ್ರತಾ ಪಡೆಗಳನ್ನು ನಿಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಗೋಲ ಗುಮ್ಮಟ ರಕ್ಷಣೆ ಮಾಡುವುದು ಪ್ರತೀಯೊಬ್ಬರ ಕರ್ತವ್ಯ. ಪ್ರವಾಸಿಗರು ಇದೇ ರೀತಿ ವರ್ತಿಸುತ್ತಿದ್ದರೆ, ದಂಡವನ್ನು ವಿಧಿಸಲಾಗುತ್ತದೆ ಎಂದು ಇತಿಹಾಸಕಾರ ಅಬ್ದುಲ್ ಆಜಿಜ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com