ಕಚೇರಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ : ಹೌಸ್ ಕೀಪಿಂಗ್ ಮೇಲ್ವಿಚಾರಕ ಬಂಧನ!

ಸಾಪ್ಟ್ ವೇರ್ ಕಂಪನಿಯೊಂದರ ಕಚೇರಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಹೌಸ್ ಕೀಪಿಂಗ್ ಮೇಲ್ವಿಚಾರಕನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಪ್ಟ್ ವೇರ್ ಕಂಪನಿಯೊಂದರ ಕಚೇರಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ  ಹೌಸ್ ಕೀಪಿಂಗ್ ಮೇಲ್ವಿಚಾರಕನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ದೇವರಬೀಸನಹಳ್ಳಿಯಲ್ಲಿನ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಈ ಘಟನೆ ನಡೆದಿದ್ದು, ಮೋಹನ್ ಬಾಬು ಎಂಬ ಆರೋಪಿಯನ್ನು  ಬಂಧಿಸಲಾಗಿದೆ.

 ಆಂಧ್ರಪ್ರದೇಶದಿಂದ ಬಂದಿದ್ದ ಮೋಹನ್ ಬಾಬು ಬೆಳ್ಳಂದೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಎರಡು ವರ್ಷಗಳ ಹಿಂದೆ ಹೌಸಿಂಗ್ ಕೀಪಿಂಗ್ ಮೇಲ್ವಿಚಾರಕನಾಗಿ ಕಂಪನಿಗೆ ಸೇರಿದ್ದ ಎಂಬುದು ತಿಳಿದುಬಂದಿದೆ.

ಆದರೆ, ಈತನ ವಿರುದ್ಧ ಕಂಪನಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಅಕ್ಟೋಬರ್ 5 ರಂದು ಕೆಲಸಕ್ಕೆ ಬಂದಿದ್ದ ಮಹಿಳೆಯನ್ನು ಶೌಚಾಲಯ ಸ್ವಚ್ಛಗೊಳಿಸುವಂತೆ ಬಾಬು ಹೇಳಿದ್ದಾನೆ. ಕಂಪನಿ ನೌಕರರೆಲ್ಲರೂ ಊಟಕ್ಕೆ ತೆರಳಿದ ಸಂದರ್ಭದಲ್ಲಿ  ಶೌಚಾಲಯ ಕೊಠಡಿ ಬಾಗಿಲು ಹಾಕಿ ಅತ್ಯಾಚಾರ ನಡೆಸಿದ್ದಾನೆ.  ನಂತರ ಮನೆಗೆ ತೆರಳಿದ ಮಹಿಳೆ ಯಾರೊಂದಿಗೂ ಈ ವಿಷಯ ಹೇಳಿರಲಿಲ್ಲ.  ಒಂದು ವಾರದ ನಂತರ ಆಕೆ ತನ್ನ ಪತಿಗೆ ವಿಷಯ ತಿಳಿಸಿದ್ದು, ನಂತರ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಆರೋಪಿ ಬಾಬುವನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com