ಚನ್ನಸಂದ್ರದ ಈಶ ಮಿಸ್ಟಿ ಗ್ರೀನ್ ಅಪಾರ್ಟ್ಮೆಂಟ್ ನ ನಿವಾಸಿಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ವೈಟ್ ಫೀಲ್ಡ್ ವಿಭಾಗದ ಪೊಲೀಸರು ಅ.19 ರಂದು ಇಬ್ಬರು ಮಹಿಳೆಯರೂ ಸೇರಿದಂತೆ ಕಾಡುಗೋಡಿಯ 7 ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮುನಿಸ್ವಾಮಿ, ಶ್ರೀನಿವಾಸ ಗೌಡ, ಓಂ ಪ್ರಕಾಶ್ ಗೌಡ, ಅನಿಲ್, ವಿನೋದ್, ಶಶಿಕಲಾ ಹಾಗೂ ಹೇಮಾವತಿ ಎಂದು ಗುರುತಿಸಲಾಗಿದೆ.