ಬೆಂಗಳೂರು: ಅಕ್ರಮ ಮರಳುಗಾಕೆ ನಡೆಸಿದ್ದ ಇಬ್ಬರ ಬಂಧನ

ಕೆರೆಯಿಂದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಬೆಂಗಳೂರು ಪೋಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕೆರೆಯಿಂದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಬೆಂಗಳೂರು ಪೋಲೀಸರು ಮಾಲು ಸಮೇತ ಬಂಧಿಸಿದ್ದಾರೆ.
ಶನಿವಾರ ಬೆಳಿಗ್ಗೆ ಮುಗಳೂರು ಕೆರೆ ಸಮೀಪದಲ್ಲಿ ಮರಳು ತೆಗೆಯುತ್ತಿರುವುದನ್ನು ಗಮನಿಸಿದ ಕೆಲ ಸ್ಥಳೀಯರು ಅನಿಲ್ ಕುಮಾರ್ ಹಾಗೂ ಇತರರು ಈ ಸಂಬಂಧ ಪೋಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.
"ನಾವು ಆಪರೇಟರ್ ಗಳ ಬಗ್ಗೆ ದೂರಿತ್ತಿದ್ದೇವೆ.ಘಟನೆಯ ಸಂಬಂದ ಪ್ರಾದೇಶಿಕ ತಹಶೀಲ್ದಾರರಿಗೆ ಮಾಹಿತಿ ನೀಡಿದ್ದೇವೆ" ಅನಿಲ್ಕುಮಾರ್ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಕೆರೆಯಿಂದ ಮರಳು ತೆಗೆಯುತ್ತಿರುವ್ವರ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದು ಇದೀಗ ಈ ಅಕ್ರಮ ಮರಳು ಗಣಿಗಾರಿಕೆ ನಡೆಸುವವರ ವಿರುದ್ಧ  ಎಫ್ಐಆರ್ ದಾಖಲಿಸಿದ್ದಾರೆ.
ಶನಿವಾರ ಬೆಳಿಗ್ಗೆ ಅಕ್ರಮ ಮರಳು ಗಣಿಗಾರಿಕೆ ನಡೆಯುವುದು ತಿಳಿಯುವ ಮುನ್ನ ಸಹ ಸ್ಥಳೀಯರು ಅಕ್ರಮ ಮರಳು ಸಾಗಣೆ ವಿರುದ್ಧ ಚರ್ಚಿಸಲು ಸಭೆ ಸೇರಿದ್ದರು.ಆ ವೇಳೆ ಕೆರೆ ಸುತ್ತಮುತ್ತ ಟ್ರಕ್ಕುಗಳ ಚಲನೆ ಕುರಿತಂತೆ ಕಳವಳ ವ್ಯಕ್ತವಾಗಿದ್ದು ಮರಳುಗಾರಿಕೆಯಿಂದಾಗಿ ಪರಿಸರ ವ್ಯವಸ್ಥೆಯಲ್ಲಿ ಪ್ರತಿಕೂಲ ಸ್ಥಿತಿ ನಿರ್ಮಾಣವಾಗಲಿದೆ.ಅಲ್ಲದೆ ಟ್ರಕ್ ಗಳ ಚಲನೆ ಅತಿಯಾಗಿದ್ದು ಇದರಿಂದ ರಸ್ತೆಗಳು ಹಾನಿಗೊಳಗಾಗುತ್ತಿದೆ ಎಂದು ಸಭೆಯಲ್ಲಿ ಪಾಲ್ಗೊಂಡ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರ್ತೆ.
ಈ ಪ್ರದೇಶದಲ್ಲಿ ಅನೇಕ ಐಟಿ ಕಂಪನಿಗಳಿದ್ದು ಕೆರೆ ಸುತ್ತಲಿನ ಭೂಮಿಗೆ ಅಪಾರ ಬೆಲೆ ಇದೆ. ಇಲ್ಲಿ ಅನೇಕ ಅಕ್ರಮ ಚಟುವಟಿಕೆಗಳು, ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದೆ."ಈ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ದೊಡ್ಡಕೆರೆ ಪ್ರದೇಶವನ್ನು  ಪುನಶ್ಚೇತನಗೊಳಿಸಲು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಲು ಅಕ್ಟೋಬರ್ 30 ರಂದು ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ"ಜಗದೀಶ್ವರ್ ಎನ್ನುವ ಸ್ಥಳೀಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com