20 ಜನರ ಪ್ರಾಣ ಉಳಿಸಿದ ಕರ್ನಾಟಕದ ವೀರ ಯೋಧ ಹುತಾತ್ಮ!

ಹ್ಯಾಂಡ್ ಗ್ರೆನೇಡ್ ಸ್ಪೋಟವಾಗುವ ಮುನ್ನ ಕಂಟೇನರ್ ನಿಂದ ಹೊರಕ್ಕೆ ಜಿಗಿದು 20 ಜನರ ಪ್ರಾಣ ಕಾಪಾಡಿದ ಕರ್ನಾಟಕ ಮೂಲದ ಯೋಧನೊಬ್ಬ ಹುತಾತ್ಮನಾದ ಘಟನೆ ಮಣಿಪುರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಂಪಾಲ್: ಹ್ಯಾಂಡ್ ಗ್ರೆನೇಡ್ ಸ್ಪೋಟವಾಗುವ ಮುನ್ನ ಕಂಟೇನರ್ ನಿಂದ ಹೊರಕ್ಕೆ ಜಿಗಿದು 20 ಜನರ ಪ್ರಾಣ ಕಾಪಾಡಿದ ಕರ್ನಾಟಕ ಮೂಲದ ಯೋಧನೊಬ್ಬ ಹುತಾತ್ಮನಾದ ಘಟನೆ ಮಣಿಪುರದಲ್ಲಿ ನಡೆದಿದೆ.
ಮಣಿಪುರ ಇಂಪಾಲ್, ನಾಗಂಪಾಲ್ ಎನ್ನುವಲ್ಲಿ ಶನಿವಾರ ಸಂಜೆ ಸಂಭವಿಸಿದ ಘಟನೆಯಲ್ಲಿ ಬೆಳಗಾವಿ ಗೋಕಾಕ ಮೂಲದ ಉಮೇಶ್ ಹೆಳವರ್(35) ಹುತಾತ್ಮರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ನಿವಾಸಿ ಉಮೇಶ್ ಮಣಿಪುರದ ಇಂಪಾಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಶನಿವಾರ ಸಂಜೆ ಇಂಪಾಲ್ ಮಾರುಕಟ್ಟೆಯಿಂದ ದ ಹ್ಯಾಂಡ್ ಗ್ರೆನೇಡ್ ಲೋಡ್ ಮಾಡಿ ಕಾಂಗ್ಲಾಟೊಂಬಿ ತರಬೇತಿ ಶಿಬಿರಕ್ಕೆ ತೆರಳುತ್ತಿದ್ದಾಗ ಗ್ರೆನೇಡ್ ಸ್ಪೋಟವಾಗಿದೆ. ಆ ಸಮಯಕ್ಕೆ ಸರಿಯಾಗಿ ಯೋಧ ಉಮೇಶ್ ತಾವಿದ್ದ ಕಂಟೇನರ್ ನಿಂದ ಹೊರಕ್ಕೆ ಜಿಗಿದಿದ್ದಾರೆ. ಗ್ರೆನೇಡ್ ಸಮೇತ ಹೊರಕ್ಕೆ ಜಿಗಿದ ಉಮೇಶ್ ವಾಹನದಲ್ಲಿದ್ದ ಸುಮಾರು 20 ಮಂದಿಯ ಪ್ರಾಣ ರಕ್ಷಿಸಿ ತಾವು ಪ್ರಾಣತ್ಯಾಗ ಮಾಡಿದ್ದಾರೆ.
ಭಾನುವಾರ ವೀರ ಯೋಧ ಉಮೇಶ್ ಪಾರ್ಥಿವ ಶರೀರ ಗೋಕಾಕ್ ತಲುಪುವ ಸಾಧ್ಯತೆ ಇದೆ. ಸುದ್ದಿ ತಿಳಿದ ಯೋಧರ ಕುಟುಂ, ಸ್ನೇಹಿತರು ಶೋಕತಪ್ತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com