ಬಿಬಿಎಂಪಿ ಶಾಲೆ ಮಕ್ಕಳಿಗೆ ಸದ್ಯದಲ್ಲಿ ಟ್ಯಾಬ್ ವಿತರಣೆ, ಇಂಗ್ಲಿಷ್ ಕಲಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಶಾಲೆಗಳನ್ನು ರಾಜ್ಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಶಾಲೆಗಳನ್ನು ರಾಜ್ಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಸಮಾನವಾಗಿ ತರಲು ಬಿಬಿಎಂಪಿ ರೋಶಿನಿ ಅಡಿಯಲ್ಲಿ ಎರಡು ತಂತ್ರಜ್ಞಾನ ದಿಗ್ಗಜ ಸಂಸ್ಥೆಗಳಾದ ಮೈಕ್ರೊಸಾಫ್ಟ್ ಮತ್ತು ಟೆಕ್ ಅವಂಟ್ ಗಾರ್ಡೆ ಕೈ ಜೋಡಿಸಿವೆ.

ಈ ಕುರಿತು ನಿನ್ನೆ ಸೆಮಿನಾರ್ ನಡೆಸಲಾಗಿತ್ತು. ಬಿಬಿಎಂಪಿಯ ವಾರ್ಡುಗಳಲ್ಲಿರುವ ಸುಮಾರು 156 ಶಾಲೆಗಳು ಮತ್ತು ಕಾಲೇಜುಗಳ ಸುಮಾರು 900 ಶಿಕ್ಷಕರು ಭಾಗವಹಿಸಿದ್ದರು. ಟೆಕ್ ಅವಂಟ್ ಗಾರ್ಡೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲಿ ಸೇಠ್, ಎರಡೂವರೆ ವರ್ಷದ ಈ ಯೋಜನೆಗೆ ಸುಮಾರು 500ರಿಂದ 600 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದರು.

ಸದ್ಯದಲ್ಲಿಯೇ ಎಲ್ಲಾ ಶಿಕ್ಷಕ-ಶಿಕ್ಷಕಿಯರಿಗೆ ಟ್ಯಾಬ್ ಗಳನ್ನು ನೀಡುತ್ತೇವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬಿಬಿಎಂಪಿಯ 17 ಸಾವಿರ ವಿದ್ಯಾರ್ಥಿಗಳಿಗೆ ಟ್ಯಾಬ್ ಗಳನ್ನು ನೀಡಲಾಗುತ್ತದೆ. ಶಾಲೆಗಳಲ್ಲಿ ಟ್ಯಾಬ್ ಗಳಿಗೆ ಚಾರ್ಜ್ ಮಾಡಲು ಸೌರ ವಿದ್ಯುತ್ ಫಲಕವನ್ನು ಸ್ಥಾಪಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com