ಬೆಂಗಳೂರು: ನಾಲ್ಕನೇ ಅಂತಸ್ತಿನ ಮಹಡಿಯಿಂದ ಜಿಗಿದು ವೃದ್ಧ ಆತ್ಮಹತ್ಯೆ

ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್ ನ ಅಪಾರ್ಟ್ ಮೆಂಟ್ ವೊಂದರ ನಾಲ್ಕನೇ ಅಂತಸ್ತಿನ ಮಹಡಿ ಮೇಲಿಂದ ಜಿಗಿದು 83 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್ ನ ಅಪಾರ್ಟ್ ಮೆಂಟ್ ವೊಂದರ ನಾಲ್ಕನೇ ಅಂತಸ್ತಿನ ಮಹಡಿ ಮೇಲಿಂದ ಜಿಗಿದು 83 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣೋಜಿ ರಾವ್  ಮೃತಪಟ್ಟ ದುರ್ದೈವಿ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೈಲರ್ ವೃತ್ತಿ ಮಾಡುತ್ತಿದ್ದ ಕೃಷ್ಣೋಜಿರಾವ್  ಒಂದು ಕೈ ಮುರಿದಿದ್ದು,ಮೊದಲ ಮಹಡಿಯಲ್ಲಿರುವ ತನ್ನ ಮಗನ ಮನೆಯಲ್ಲಿ  ಅವರ ಹೆಂಡತಿ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಕೃಷ್ಣೋಜಿರಾವ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯಾವುದೇ ಡೆತ್ ನೋಟ್ ಬರೆದಿಲ್ಲ.ಮುಂದಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸಹಾಯವಾಣಿ
ನೀವು ಯಾವುದೇ ಮಾನಸಿಕ ಒತ್ತಡ ಅಥವಾ ಆತ್ಮಹತ್ಯೆಯಂತಹ ಚಿಂತನೆಗೊಳಗಾಗಿದಲ್ಲೀ ಸಹಾಯವಾಣಿ 080-25497777 ಸಂಪರ್ಕಿಸುವ ಮೂಲಕ ಅಗತ್ಯ ಸಲಹೆ ಪಡೆದುಕೊಳ್ಳಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com