ಅಮ್ನೆಸ್ಟಿ ಇಂಟರ್ ನ್ಯಾಷನಲ್ ಬೆಂಗಳೂರು ಶಾಖೆ ಮೇಲೆ ಇಡಿ ದಾಳಿ!

ಬೆಂಗಳುರು ನಗರದಲ್ಲಿನ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಛೇರಿಯ ಮೇಲೆ ಗುರುವಾರ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಮ್ನೆಸ್ಟಿ ಇಂಟರ್ ನ್ಯಾಷನಲ್
ಅಮ್ನೆಸ್ಟಿ ಇಂಟರ್ ನ್ಯಾಷನಲ್
ಬೆಂಗಳೂರು : ಬೆಂಗಳೂರು ನಗರದಲ್ಲಿನ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಕಛೇರಿಯ ಮೇಲೆ ಗುರುವಾರ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಾನವ ಹಕ್ಕುಗಳ ಸಂಸ್ಥ್ ಅಮ್ನೆಸ್ಟಿ ಇಂತರ್ ನ್ಯಾಷನಲ್ ಮೇಲೆ ಇಡಿ ದಾಳಿ ನಡೆಇದೆ. ವಿದೇಶಿ ಬಂಡವಾಳದ ಸ್ವೀಕಾರ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಸಂಸ್ಥೆ ಮೇಲೆ ದಾಳಿ ನಡೆದಿದೆ.
ಕಳೆದ ಎರಡು ವರ್ಷಗಳಲ್ಲಿ ಲಾಭದಾಯಕ ಸಂಘಟನೆಗಳ ವಿದೇಶೀ ಬಂಡವಾಳದ ಹರಿವು ನಿಯಂತ್ರಿಸಲು ಕೇಂದ್ರ ಸರ್ಕಾರ ಕಠಿಣ ಕಾನೂನಿನ ಕ್ರಮಕ್ಕೆ ಮುಂದಾಗಿದೆ.
ಇದೇ ವೇಳೆ ಇನ್ನೊಂದು ಮಹತ್ವದ ಲಾಭದಾಯಕವಲ್ಲದ ಸಂಸ್ಥೆ ಗ್ರೀನ್ ಪೀಸ್ ಇಂಡಿಯಾ ಮೇಲೆ ಸಹ ಇಡಿ ದಾಳಿ ನಡೆದಿದೆ.
ವಿದೇಶದಲ್ಲಿ ಹಣವನ್ನು ಸ್ವೀಕಾರದ ವೇಳೆ ವಿದೇಶೀ ವಿನಿಮಯ ಕಾಯ್ದೆಯನ್ನು ಗ್ರೀನ್ ಪೀಸ್ ಇಂಡಿಯಾ ಉಲ್ಲಂಘಿಸಿದೆ ಎಂಬ ಆರೋಪವಿದೆ.2015ರಲ್ಲಿ ಗ್ರೀನ್ ಪೀಸ್ ದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ ನೋಂದಣಿ ಕೇಂದ್ರವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿತ್ತು.
ಎರಡೂ ಸಂಸ್ಥೆಗಳು  "ರಾಷ್ಟ್ರೀಯ ವಿರೋಧಿ ಚಟುವಟಿಕೆಗಳಲ್ಲಿ" ಭಾಗಿಯಾಗಿದೆ ಎನ್ನುವ ಆರೋಪವನ್ನು ಆಯಾ ಸಂಸ್ಥೆಯ ಮೂಲಗಳು ನಿರಾಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com