ಸತತ 894 ದಿನ ವಿದ್ಯುತ್ ಉತ್ಪಾದಿಸಿ ವಿಶ್ವದಾಖಲೆ ಬರೆದ ಕೈಗಾ ಸ್ಥಾವರ

ಕೈಗಾ ಅಣುವಿದ್ಯುತ್ ಸ್ಥಾವರದ 1ನೇ ಘಟಕ ನಿರಂತರ 894 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಭಾರಜಲ ಆಧಾರಿತ ಅಣು ವಿದ್ಯುತ್ ಘಟಕಗಳಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನಕ್ಕೆ ಬುಧವಾರ ಲಗ್ಗೆ ಇಟ್ಟಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾರವಾರ: ಕೈಗಾ ಅಣುವಿದ್ಯುತ್ ಸ್ಥಾವರದ 1ನೇ ಘಟಕ ನಿರಂತರ 894 ದಿನಗಳ ಕಾಲ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಭಾರಜಲ ಆಧಾರಿತ ಅಣು ವಿದ್ಯುತ್ ಘಟಕಗಳಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನಕ್ಕೆ ಬುಧವಾರ ಲಗ್ಗೆ ಇಟ್ಟಿದೆ. 
ಬುಧವಾರದವರೆಗೆ ನಿರಂತರ 984 ದಿನಗಲ ಕಾಲ ವಿದ್ಯುತ್ ಉತ್ಪಾನೆ ಮಾಡಿರುವ ಕೈಗಾ ಅಣುಸ್ಥಾವರದ ಮೊದಲ ಘಟಕ, ಕೆನಡಾದ ಪಿಕೆರಿಂಗ್ ಘಟಕದ ಸಾಧನೆಯನ್ನು ಸರಿಗಟ್ಟಿದೆ. ಇದರಂತೆ ಇಂದು ಬೆಳಿಕ್ಕೆ 9.15ರ ಸುಮಾರಿದೆ ವಿಶ್ವದಾಖಲೆಗೆ ಪಾತ್ರವಾಗಲಿದೆ. 
ಕೈಗಾ 1ನೇ ಘಟಕ 2016ರ ಮೇ.13ರಿಂದ 2018ರ ಅ.24ರವರೆಗೆ ಅದರೆ ಒಟ್ಟು 894 ದಿನಗಳ ಕಾಲ ಸತತವಾಗಿ ವಿದ್ಯುತ್ ಉತ್ಪಾದನೆ ಮಾಡಿದೆ. ರಾಜಸ್ಥಾನದ ರಾವತಭಟ್ಟಾದಲ್ಲಿರುವ 5ನೇ ಘಟಕ ನಿರಂತದ 765 ದಿನಗಳ ವಿದ್ಯುತ್ ಉತ್ಪಾದಿಸಿ ದೇಶದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತ್ತು. 
ಬ್ರಿಟನ್ ಅಣು ವಿದ್ಯುತ್ ಘಟಕ ಸತತ 940 ದಿನಗಳ ಕಾಲ ವಿದ್ಯುತ್ ಉತ್ಪಾದಿಸುವ ಮೂಲಕ ಜಾಗತಿಕ ದಾಖಲೆ ಮಾಡಿದೆ. ಆದರೆ, ಇದು ಭಾರಜಲ ಆಧಾರಿತ ಅಣು ವಿದ್ಯುತ್ ಘಟಕ ಅಲ್ಲ. ಗ್ಯಾಸ್ ಆಧಾರಿತ ಅಣು ವಿದ್ಯುತ್ ಘಟಕವಾಗಿದ್ದು, ಕೈಗಾ ಘಟಕ ಆ ದಾಖಲೆಯನ್ನು ಮೀರಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. 
220 ಮೆಗಾ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವ ಮೊದಲನ್ ಘಟಕ 2016 ಮೇ.13ರಿಂದಲೂ ಸ್ಥಗಿತಗೊಳ್ಳದೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶೀಯ ಇಂಧನ (ಯುರೇನಿಯಂ) ಮೂಲಕ ಉತ್ತೇಜಿಸಲ್ಪಟ್ಟ ಪಿಹೆಚ್'ಡಬ್ಲ್ಯೂಆರ್ 2000ರಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿತ್ತು. ಇಲ್ಲಿಯವರೆಗೂ ಈ ಘಟಕ ಸುಮಾರು 2,644 ಯುನಿಟ್ ಕೋಟಿಯಷ್ಟು ವಿದ್ಯುತ್ ಉತ್ಪಾದಿಸಿದೆ. 894 ದಿನಗಳ ನಿರಂತರ ಕಾರ್ಯದಿಂದ ಈ ವರೆಗೂ ಘಟಕ 470 ಕೋಟಿ ವಿದ್ಯುತ್ ಉತ್ಪಾದಿಸಿದೆ ಎಂದು ಕೈಗಾ ಸ್ಥಾವರದ ವಕ್ತಾರ ಹೇಳಿದ್ದಾರೆ. 
ನಾಲ್ಕು ತಿಂಗಳ ಹಿಂದಷ್ಟೇ ಕೈಗಾ ಸ್ಥಾವರ 766 ದಿನಗಳ ಸತತ ಕಾರ್ಯದಿಂದಾಗಿ ರಾಷ್ಟ್ರ ದಾಖಲೆ ಬರೆದಿದ್ದು. ಇಂತಹ ಸಾಧನೆಯನ್ನು ಮಾಡದ ಅಮೆರಿಕ ಹಾಗೂ ಬ್ರಿಟನ್ ರಾಷ್ಟ್ರಗಳು ಇದೀಗ ಭಾರತದತ್ತ ಮುಖ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಕೈಗಾ ಸ್ಥಾವರದ ಎಲ್ಲಾ ಘಟಕಗಳ ಕಾರ್ಯನಿರ್ವಹಣೆಗಳನ್ನು ಅಟಾಮಿಕ್ ಎನರ್ಜಿ ರೆಗ್ಯುಲೇಟರಿ ಬೋರ್ಡ್ ಪರಿಶೀಲನೆ ನಡೆಸುತ್ತಿದೆ. ಘಟಕಗಳೂ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತಂತೆ ಅಧಿಕಾರಿಗಳು ಆಗಾಗ ಪರಿಶೀಲನೆ ನಡೆಸುತ್ತಿರುತ್ತಾರೆ. ನಿರ್ವಹಣೆಯ ಅಗತ್ಯತೆ ಬಿದ್ದಾಗ ಅಧಿಕಾರಿಗಳೇ ಘಟಕ ಕಾರ್ಯಗಳನ್ನು ನಿಲ್ಲಿಸುವಂತೆ ಸೂಚಿಸುತ್ತಾರೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕಾರಿಗಳು ಕೈಗಾ ಸ್ಥಾವರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಇನ್ನೂ ಕೆಲ ತಿಂಗಳೂಗಳ ನಿರಂತರವಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com