ಹದಿಹರೆಯದ ಹೆಣ್ಣುಮಕ್ಕಳಿಗೆ ಬೆಂಗಳೂರು ಮೂರನೇ ಅತ್ಯುತ್ತಮ ನಗರ: ವರದಿ

ಹದಿಹರೆಯದ ಬಾಲಕಿಯರಿಗೆ ಬೆಂಗಳೂರು ಮೂರನೇ ಅತ್ಯುತ್ತಮ ನಗರವಾಗಿದೆ ಎಂದು ನಂದಿ ಫೌಂಡೇಶನ್ ಮತ್ತು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹದಿಹರೆಯದ ಬಾಲಕಿಯರಿಗೆ ಬೆಂಗಳೂರು ಮೂರನೇ ಅತ್ಯುತ್ತಮ ನಗರವಾಗಿದೆ ಎಂದು ನಂದಿ ಫೌಂಡೇಶನ್ ಮತ್ತು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ, 
ಕೇರಳ ಮಂತ್ತು ಮಿಜೋರಾಂ ಮೊದಲ ಎರಡು ಸ್ಥಾನ ಪಡೆದಿದ್ದು, ಬೆಂಗಳೂರು, ಕೊಲ್ಕತಾ ಮತ್ತು ಮುಂಬಯಿ ಮೂರು ನಗರಗಳು ಮೂರನೇ ಸ್ಥಾನದಲ್ಲಿವೆ.
ಬಂಡವಾಳ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವಕಾಶಗಳನ್ನು ನೀಡುವ ಮೂಲಕ ಯುವ ಮಹಿಳೆಯರಲ್ಲಿ ಧನ್ಮಾತ್ಮಕ  ಭಾವನೆ ಮೂಡಿಸುತ್ತದೆ, ಆ ಮೂಲಕ ಸಮಾಜದಲ್ಲಿ   ಆರ್ಥಿಕವಾಗಿ ಸದೃಢರನ್ನಾಗಿಸುತ್ತದೆ. 
ಬಾರತದಲ್ಲಿ ಇಂದು ಸುಮಾರು 80 ಮಿಲಿಯನ್ ಟೀನೇಜ್ ಹುಡುಗಿಯರಿದ್ದಾರೆ, ಅವರು ಹೇಗಿದ್ದಾರೆ, ಅವರಿಗೆ ತಾವು ವಾಸಿಸುವ ಸ್ಥಳ ಸುರಕ್ಷಿತವಾಗಿದೆಯೇ, ಅವರ ಶಿಕ್ಷಣ ಮತ್ತು ಸ್ವಚ್ಛತೆ ಗಳ ಬಗ್ಗೆ ದತ್ತಾಂಶ ಲಭ್ಯವಾಗಿದೆ.
ಸುಮಾರು 1ಸಾವಿರ ಸಮೀಕ್ಷೆದಾರರು ದೇಶದ 30 ರಾಜ್ಯಗಳ 600 ಜಿಲ್ಲೆಗಳ 74 ಸಾವಿರ ಯುವತಿಯರನ್ನು ಭೇಟಿ ಮಾಡಲಾಗಿತ್ತು, ಅದರಲ್ಲಿ ಅವರ ಎತ್ತರ, ಉದ್ದ ಹಾಗಬ ಹಿಮೋಗ್ಲೋಬಿನ್ ಮಟ್ಟಗಳ ಆಳತೆ ಮಾಡಲಾಯಿತು.
ಶೇ. 81 ರಷ್ಟು ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ,  ಆಂಧ್ರ ಪ್ರದೇಶ, ಕೇರಳ, ತೆಲಂಗಾಣ, ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ್ಲಿ ಹೆಣ್ಣು ಮಕ್ಕಳು ಶೇ.100 ರಷ್ಟು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಅವರು ಶಿಕ್ಷಣವನ್ನು .ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ, ನಗರ ಪ್ರದೇಶದ ಶೇ. 87ರಷ್ಟು ಹೆಣ್ಣು ಮಕ್ಕಳಿಗೆ ಹೋಲಿಸಿದರೇ  ಗ್ರಾಮೀಣ ಪ್ರದೇಶದಲ್ಲಿ  ಶೇ. 78 ರಷ್ಟು ಹೆಣ್ಣಪ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶೇ, 96 ರಷ್ಟು ಹೆಣ್ಣು ಮಕ್ಕಳು ಅವಿವಾಹಿತರಾಗಿದ್ದಾರೆ,
ಶೇ. 40 ರಷ್ಟು ಹೆಣ್ಣು ಮಕ್ಕಳು  ಇನ್ನೂ ಬಯಲು ಶೌಚಾಲಯ ಬಳಕೆ ಮಾಡುತ್ತಿದ್ದಾರೆ, ಶೇ. 46 ರಷ್ಟು ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುತ್ತಿದ್ದಾರೆ. ಪ್ರತಿ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ನಗರ ಮತ್ತು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಬ್ಬರಲ್ಲೂ ಹಿಮೋಗ್ಲೋಬಿನ್ ಪ್ರಮಾಣ  ಒಂದೇ ರೀತಿಯಿದೆ ಎಂದು ಸಮೀಕ್ಷೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com