ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಜಸ್ಟೀಸ್ ಬೋಪಣ್ಣ ನೇಮಕ

ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಎ.ಎಸ್. ಬೋಪಣ್ಣ ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಹೈಕೋರ್ಟ್  ನ್ಯಾಯಾಧೀಶರಾಗಿದ್ದ  ಎ.ಎಸ್. ಬೋಪಣ್ಣ  ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ನ್ಯಾಯಾಧೀಶರಾಗಿದ್ದ ಅಜಿಕುಟೀರಾ ಸೋಮಯ್ಯ ಬೋಪಣ್ಣ ಅವರನ್ನು  ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು  ನೇಮಕ ಮಾಡಿ,  ಇದೇ ತಿಂಗಳ 24 ರಂದು ಹೊರಡಿಸಿರುವ ಆದೇಶವನ್ನು  ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ರಾಜೇಂದರ್ ಕಶ್ಯಪ್ ಪ್ರಕಟಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಸ್ಟೀಸ್ ಬೋಪಣ್ಣ ಅವರಿಗೆ ರಾಜ್ಯ ಬಾರ್ ಕೌನ್ಸಿಲ್  ವತಿಯಿಂದ ಇಂದು ಹೈಕೋರ್ಟ್ ಆವರಣದಲ್ಲಿ  ಬೀಳ್ಗೂಡುಗೆ  ಸಮಾರಂಭವನ್ನು  ಆಯೋಜಿಸಲಾಗಿತ್ತು.

ಬೋಪಣ್ಣ ಅವರನ್ನು ಗುವಾಹಟಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸುವಂತೆ ಸುಪ್ರೀಂಕೋರ್ಟ್ ಕೋಲಿಜಿಯಂ ಇತ್ತೀಚಿಗೆ ಶಿಫಾರಸ್ಸು ಮಾಡಿತ್ತು.  ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನಿ ಗೊಗೊಯ್ ನೇತೃತ್ವದ ಕೊಲೀಜಿಯಂ ಬೋಪಣ್ಣ ಅವರನ್ನು ಅವಿರೋಧವಾಗಿ ನೇಮಕಗೊಳಿಸಿ, ಕೇಂದ್ರಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com