ಗೌರಿ ಲಂಕೇಶ್ ಹತ್ಯೆ ಆರೋಪಿಯಿಂದ ಖಾಲಿ ಪತ್ರಗಳಿಗೆ ಬಲವಂತದಿಂದ ಸಹಿ : ಎಸ್ ಐಟಿ ನಿರಾಕರಣೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದ 17 ಆರೋಪಿ ವಾಸುದೇವ್ ಸೂರ್ಯವಂಶಿ ಪೊಲೀಸ್ ಕಸ್ಟಡಿ ಅವಧಿ ನಿನ್ನೆಗೆ ಮುಕ್ತಾಯಗೊಂಡಿದ್ದು, ಎಸ್ ಐಟಿ ಅಧಿಕಾರಿಗಳು ಬಲವಂತದಿಂದ ಅನೇಕ ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾನೆ.

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದ 17 ಆರೋಪಿ   ವಾಸುದೇವ್ ಸೂರ್ಯವಂಶಿ  ಪೊಲೀಸ್ ಕಸ್ಟಡಿ ಅವಧಿ ನಿನ್ನೆಗೆ ಮುಕ್ತಾಯಗೊಂಡಿದ್ದು,  ಎಸ್ ಐಟಿ ಅಧಿಕಾರಿಗಳು ಬಲವಂತದಿಂದ ಅನೇಕ ಕಾಗದ ಪತ್ರಗಳಿಗೆ  ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾನೆ.

ಕೋಕಾ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಧೀಶರ ಮುಂದೆ ಎಸ್ ಐಟಿ ಅಧಿಕಾರಿಗಳು ಹಾಜರುಪಡಿಸಿದಾಗ ಆತ ಒಪ್ಪಿಕೊಳ್ಳದಿದ್ದರೂ ಬಲವಂತದಿಂದ ಅನೇಕ ಖಾಲಿ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು  ವಾಸುದೇವ್ ಸೂರ್ಯವಂಶಿ ಆರೋಪಿಸಿದ್ದಾನೆ.

ಈ ಸಂಬಂಧ ಆತನ ಪರ ವಕೀಲ ನಾಗೇಶ್ ಜೋಷಿ , ವಿಶೇಷ ನ್ಯಾಯಾಲಕ್ಕೆ ದೂರು ಸಲ್ಲಿಸಿದ್ದು, ಪೊಲೀಸರು ಸೇರಿದಂತೆ ಯಾರಿಗೂ ಆತ ತಪ್ಪೊಪ್ಪಿಗೆ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

 ಕೆಲ ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಕೆಲ ಅಧಿಕಾರಿಗಳು ಆರೋಪಿಯಿಂದ ಖಾಲಿ ಪತ್ರಗಳಿಗೆ ಸಹಿ ಪಡೆದುಕೊಂಡಿದ್ದಾರೆ. ಆತ ಓದಲೂ ಕೂಡಾ ಅವಕಾಶ ನೀಡದೆ ಸಹಿ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.

 ಆದರೆ, ಈ ಆರೋಪ ದುರುದ್ದೇಶ ಹಾಗೂ ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂದು ಎಸ್ ಐಟಿ ಹೇಳಿದೆ. ಆರೋಪಿಯಿಂದ ತಪ್ಪೊಪ್ಪಿಕೆ ಹೇಳಿಕೆ ಪಡೆದ ನಂತರ ಎಸ್ ಪಿ ಮಟ್ಟದ ಅಧಿಕಾರಿಗಳು  ಕೂಡಲೇ  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಸ್ ಪಿಗಳು ಎಸ್ ಐಟಿಯ ಭಾಗವಾಗಿರುವುದಿಲ್ಲ . ಆರೋಪಿ ಇಂತಹ ಯಾವುದೇ ಆರೋಪ ಮಾಡಿಲ್ಲ ಎಂದು ಎಸ್ ಐಟಿ ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ ನಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಿದಾಗ  ಸಹಿ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ನ್ಯಾಯಾಲಯ ಆತನನ್ನು ನ್ಯಾಯಾಲಯ ಕಸ್ಟಡಿಗೆ ಒಪ್ಪಿಸಿದೆ.

ಈ ನಡುವೆ  ಗೌರಿ ಹತ್ಯೆ ಪ್ರಕರಣದ ಏಳನೇ ಆರೋಪಿ ಮೋಹನ್ ನಾಯಕ್  ಸಲ್ಲಿಸಿದ ಜಾಮೀನು ಅರ್ಜಿಯನ್ನು  ನ್ಯಾಯಾಲಯ ತಿರಸ್ಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com