ಬೆಂಗಳೂರು: ಬೀದಿ ನಾಯಿಗಳಿಗೆ ವಿಷ ಹಾಕಿದ ದುಷ್ಕರ್ಮಿಗಳು, 4 ನಾಯಿಗಳ ಸ್ಥಿತಿ ಗಂಭೀರ

ದುಷ್ಕರ್ಮಿಗಳ ತಂಡವೊಂದು ಬೀದಿ ನಾಯಿಗಳಿಗೆ ವಿಷ ಹಾಕಿರುವ ಘಟನೆ ನಗರದ ಬಿಟಿಎಂ ಲೇಔಟ್ 2ನೇ ಹಂತದಲ್ಲಿ ಭಾನುವಾರ ಸಂಜೆ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ದುಷ್ಕರ್ಮಿಗಳ ತಂಡವೊಂದು ಬೀದಿ ನಾಯಿಗಳಿಗೆ ವಿಷ ಹಾಕಿರುವ ಘಟನೆ ನಗರದ ಬಿಟಿಎಂ ಲೇಔಟ್ 2ನೇ ಹಂತದಲ್ಲಿ ಭಾನುವಾರ ಸಂಜೆ ನಡೆದಿದೆ. 
ಬಿಟಿಎಂ 2ನೇ ಹಂತದ 26ನೇ ರಸ್ತೆಗೆ ಕಾರಿನಲ್ಲಿ ಬಂದಿರುವ ದುಷ್ಕರ್ಮಿಗಳು ನಾಯಿಗಳಿಗೆ ವಿಷ ಹಾಕಿದ ಆಹಾರವನ್ನು ನೀಡಿದ್ದಾರೆ ಸ್ಥಳೀಯರು ಹೇಳಿದ್ದಾರೆ. 
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಪ್ರಾಣಿ ದಯಾ ಸಂಘದ ಸದಸ್ಯರು, 26ನೇ ರಸ್ತೆಯಲ್ಲಿ 12 ನಾಯಿಗಳು ನೋವಿನಿಂದ ನರಳುತ್ತಿವೆ ಎಂದು ಸಂಜೆ 7.30ರ ಸುಮಾರಿಗೆ ದೂರವಾಣಿ ಕರೆಯೊಂದು ಬಂದಿತ್ತು. ಕೆಲ ದುಷ್ಕರ್ಮಿಗಳು ಕಾರಿನಲ್ಲಿ ಬಂದು ನಾಯಿಗಳಿಗೆ ವಿಷಪ್ರಾಶನ ಮಾಡಿಸಿದ್ದಾರೆಂದು ಹೇಳಿದರು ಎಂದು ಹೇಳಿದ್ದಾರೆ. 

ರಸ್ತೆಯಲ್ಲಿ ಹೋಗುವ ಜನರು ಪ್ರಾಣಿಗಳಿಗೆ ಆಹಾರ ಹಾಕುವುದು, ಬಿಸ್ಕೆಟ್, ಬ್ರೆಡ್ ನೀಡುವುದು ಸಾಮಾನ್ಯ. ಈ ಪ್ರದೇಶದಲ್ಲಿ ಈ ರೀತಿ ಘಟನೆಗಳು ಎಂದಿಗೂ ನಡೆದಿರಲಿಲ್ಲ. ಸ್ಥಳೀಯರೇ ಯಾರೋ ಆಹಾರ ನೀಡುತ್ತಿರಬಹುದು ಎಂದು ತಿಳಿದಿದ್ದೆವು ಎಂದು ಸ್ಥಳೀಯ ನಿವಾಸಿ ಶಾಂತ ಅವರು ಹೇಳಿದ್ದಾರೆ. 

ಆಹಾರ ತಿಂದ ಕೆಲವೇ ನಿಮಿಷಗಳಲ್ಲಿ ನಾಯಿಗಳಿಗೆ ಅತೀವ್ರ ನೋವು ಶುರುವಾಗಿದೆ. ರಸ್ತೆಯಲ್ಲಿ ಬಿದ್ದು ಒದ್ದಾಡಲು ಆರಂಭಿಸಿವೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ನಾಯಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ 12 ನಾಯಿಗಳ ಪೈಕಿ ನಾಲ್ಕು ನಾಯಿಗಳ ಸ್ಥಿತಿ ಗಂಭೀರವಾಗಿದ್ದು, ಇನ್ನುಳಿದ ನಾಯಿಗಳು ಚೇತರಿಸಿಕೊಳ್ಳುತ್ತಿವೆ. ಆಹಾರದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪ್ರಾಣಿ ದಯಾ ಸಂಘದ ಸದಸ್ಯರು ಹೇಳಿದ್ದಾರೆ. 

ಮೈಕ್ರೋ ಲೇಔಟ್ ಪೊಲೀಸ್ ಠಾಣೆ ಹಿರಿಯ ಹಿರಿಯ ಅಧಿಕಾರಿಗಳು ಮಾತನಾಡಿ, ಪ್ರಕರಣ ಸಂಬಂಧ ಮಾಹಿತಿ ಪಡೆಯಲಾಗುತ್ತಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಕಾರಿನಲ್ಲಿ ದುಷ್ಕರ್ಮಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುದ್ದಿದೆ. ಸ್ಥಳೀಯರ ಸಹಾಯದೊಂದಿಗೆ ದುಷ್ಕರ್ಮಗಳನ್ನು ಕಂಡು ಹಿಡಿಯಲಾಗುತ್ತದೆ ಎಂದು ಹೇಳಿದ್ದಾರೆ. 

ರಾತ್ರಿ ವೇಳೆ ಅನಾಮಧೇಯ ವ್ಯಕ್ತಿಗಳು ಬಂದಾಗ ಮಾತ್ರ ನಾಯಿಗಳು ಕೂಗುತ್ತಿದ್ದವು. ಕಳ್ಳತನ ಮಾಡಲು ಬಂದಾಗ ನಾಯಿಗಳು ಅವರಿಗೆ ತೊಂದರೆ ನೀಡಬಾರದೆಂಬ ಕಾರಣಕ್ಕೆ ಈ ರೀತಿ ಮಾಡಿರಬಹುದು ಎಂದು ಮತ್ತೊಬ್ಬ ಸ್ಥಳೀಯ ನಿವಾಸಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com