ಕೇವಲ ಪಿಕ್'ನಿಕ್'ಗಷ್ಟೇ ಅಲ್ಲ ಶಾಪಿಂಗ್ ತಾಣವಾದ ನಂದಿ ಬೆಟ್ಟ
ಕೇವಲ ಪಿಕ್'ನಿಕ್'ಗಷ್ಟೇ ಅಲ್ಲ ಶಾಪಿಂಗ್ ತಾಣವಾದ ನಂದಿ ಬೆಟ್ಟ

ನಂದಿ ಬೆಟ್ಟ ಈಗ ಕೇವಲ ಪಿಕ್'ನಿಕ್ ಸ್ಪಾಟ್ ಅಷ್ಟೇ ಅಲ್ಲ, ಶಾಪಿಂಗ್ ತಾಣ ಕೂಡ!

ಸಮುದ್ರ ಮಟ್ಟದಿಂದ 4851 ಅಡಿ ಎತ್ತರದಲ್ಲಿರುವ ನಂದಿ ಗಿರಿಧಾಮ ಕೇವಲ ಪಿಕ್'ತಾಣವಷ್ಟೇ ಅಲ್ಲ, ಶಾಪಿಂಗ್ ತಾಣವಾಗಿಯೂ ನಿರ್ಮಾಣಗೊಂಡಿದೆ...
ಚಿಕ್ಕಬಳ್ಳಾಪುರ: ಸಮುದ್ರ ಮಟ್ಟದಿಂದ 4851 ಅಡಿ ಎತ್ತರದಲ್ಲಿರುವ ನಂದಿ ಗಿರಿಧಾಮ ಕೇವಲ ಪಿಕ್'ತಾಣವಷ್ಟೇ ಅಲ್ಲ, ಶಾಪಿಂಗ್ ತಾಣವಾಗಿಯೂ ನಿರ್ಮಾಣಗೊಂಡಿದೆ.
ಗಿರಿಧಾಮಕ್ಕೆ ಬರುವ ಪ್ರವಾಸಿಗರನ್ನು ಮತ್ತಷ್ಟು ಸೆಳೆಯುವ ಉದ್ದೇಶದಿಂದ ಹಾಗೂ ಸ್ಥಳೀಯ ಉತ್ಪನ್ನಗಳಿಗೆ, ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ನಂದಿ ಬೆಟ್ಟದಲ್ಲಿ 'ನಂದಿ ಸಂತೆ' ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. 
ನಂದಿ ಸಂತೆಯು ವಾರಾಂತ್ಯದ ದಿನಗಳಾದ ಶನಿವಾರ ಹಾಗೂ ಭಾನುವಾರ ನಡೆಯಲಿದ್ದು, ಸೆ.1ರಿಂದ ನಂದಿ ಸಂತೆಯ ಉದ್ಘಾಟನೆಯನ್ನು ಲೋಕಸಭಾ ಸದಸ್ಯ ಎಂ.ವೀರಪ್ಪ ಮೊಯ್ಲಿಯವರು ನೆರವೇರಿಸಲಿದ್ದಾರೆ. 
ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿರುವ ಈ ನಂದಿ ಬೆಟ್ಟ ಸಾಕಷ್ಟು ಪ್ರಯಾಣಿಕರನ್ನು ಸೆಳೆಯುತ್ತಿದೆ. ಪ್ರಮುಖವಾಗಿ ವಾರಾಂತ್ಯ ದಿನಗಳಲ್ಲಿ ಟೆಕ್ಕಿಗಳನ್ನು ಆಕರ್ಷಿಸುತ್ತಿದೆ. 
ನಂದಿ ಬೆಟ್ಟದಲ್ಲಿ ನಂದಿ ಸಂತೆ ನಡೆಸುವ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯ ಇಲಾಖೆ ತೆಗೆದುಕೊಂಡಿದೆ ಎಂದು ಉಪ ಆಯುಕ್ತ ಅನಿರುದ್ಧ ಶರವಣ ಅವರು ಹೇಳಿದ್ದಾರೆ. 
ವಾರಾಂತ್ಯ ದಿನಗಳಾದ ಶನಿವಾರ ಹಾಗೂ ಭಾನುವಾರ ದಿನಗಳಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಂದಿ ಸಂತೆಯನ್ನು ನಡೆಸಲಾಗುತ್ತದೆ. ನಂದಿ ಬೆಟ್ಟದ ಮೇಲೆ 10 ತಾತ್ಕಾಲಿಕ ಅಂಗಡಿಗಳನ್ನು ಸ್ಥಾಪನೆ ಮಾಡಲಾಗುತ್ತದೆ. 5 ಅಂಗಡಿಗಳು ಸ್ವಸಹಾಯ ಸಂಘಗಳು ನಡೆಸಲಿದ್ದು, ಮತ್ತೈದು ಅಂಗಡಿಗಳು ಸ್ಥಳೀಯ ಉತ್ಪನ್ನಗಳಿಗಾಗಿ ಸ್ಥಾಪನೆ ಮಾಡಲಾಗುತ್ತದೆ ಎಂದು ಶರವಣ ಅವರು ತಿಳಿಸಿದ್ದಾರೆ. 
ಈ ಅಂಗಡಿಗಳಲ್ಲಿ ಚರ್ಮ ಅಲಂಕಾರದ ಕಲೆ, ರಾಗಿಯಿಂದ ತಯಾರಿಸಿದ ಉತ್ಪನ್ನಗಳು, ಗೊಂಬೆಗಳು, ನಂದಿ ನಿಸರ್ಗ ವರ್ಣ ಚಿತ್ರ ಕಾರ್ಯಾಗಾರ, ಸಸಿಗಳು ಹಾಗೂ ಬೀಜಗಳ ಮಾರಾಟ, ಸ್ಥಳೀಯರು ಉತ್ಪಾದಿಸುವ ಕೈಮಗ್ಗ ಹಾಗೂ ಜವಳಿ ಉತ್ಪನ್ನಗಳು, ಸಿರಿ ಧಾನ್ಯಗಳು ಸಾವಯವ ತರಕಾರಿಗಳು ಮುಂತಾದವುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಅಂಗಡಿಗಳಲ್ಲಿ ಮಾರಾಟ ಮಾಡುವ ವಸ್ತುಗಳು ಹಾಗೂ ಉತ್ಪನ್ನಗಳ ಬೆಲೆಗಳನ್ನು ಜಿಲ್ಲಾ ಆಡಳಿತಾಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ, ಪ್ರವಾಸಿಗರಿಂದ ಹೆಚ್ಚಿನ ಹಣವನ್ನು ಪಡೆಯದಂತೆ ಸೂಚಿಸಲಾಗಿದ್ದು, ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಯಾಗುವುದಿಲ್ಲ ಎಂದೂ ಕೂಡ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com