ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ

ಭಾರೀ ಮಳೆ ಹಿನ್ನಲೆಯಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಹಳಿಗಳು ನಾಶಗೊಂಡಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ...
ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ
ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ
Updated on
ಬೆಂಗಳೂರು: ಭಾರೀ ಮಳೆ ಹಿನ್ನಲೆಯಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಹಳಿಗಳು ನಾಶಗೊಂಡಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. 
ಸಕಲೇಶಪುರ-ಸುಬ್ರಹ್ಮಣ್ಯ ನಡುವಿನ ಘಟ್ಟ ಪ್ರದೇಶದ 56 ಕಿಮೀ ರೈಲು ಮಾರ್ಗದಲ್ಲಿ 68 ಕಡೆ ರೈಲು ಹಳಿಗಳ ಮೇಲೆ ಭೂಕುಸಿತ ಉಂಟಾಗಿದೆ ಎಂದು ತಿಳಿದುಬಂದಿದೆ. 
ಕೆಎಸ್ಆರ್ ಬೆಂಗಳೂರು-ಕಣ್ಣೂರು/ಕಾರವಾರ ಎಕ್ಸ್'ಪ್ರೆಸ್ ಸಂಚಾರ ಸೆ.2-4 ಮತ್ತು 9-11ರವರೆಗೂ ರದ್ದುಗೊಂಡಿದೆ. 
ಕೆಎಸ್ಆರ್ ಬೆಂಗಳೂರಿಗೆ ತೆರಳುವ ಇದೇ ರೈಲು ಸೆ.1 ಮತ್ತು 5ರಿಂದ 8, 12 ಮತ್ತು 14ರವರೆಗೂ ರದ್ದುಗೊಂಡಿದೆ. ಕಣ್ಣೂರು/ಕಾರವಾರಕ್ಕೆ ತೆರಳುವ ರೈಲುಗಳು ಸೆ.2-5 ಮತ್ತು 9-15ರವರೆಗೂ ರದ್ದುಗೊಂಡಿದೆ. ಕಣ್ಣೂರು/ಕಾರವಾರ ಕ್ಕೆ ಸಂಚಾರ ನಡೆಸುವ ರೈಲು ಸೆ.6-8 ಮತ್ತು 13-15ರವರೆಗೂ ರದ್ದುಗೊಂಡಿದೆ. ಹಾಸನದಿಂದ ಮಂಗಳೂರಿಗೆ ತೆರಳುವ ರೈಲುಗಳು ಸೆ.2, 4, 6, 9, 11 ಮತ್ತು 13ರವರೆಗೂ ರದ್ದುಗೊಂಡಿದೆ. 
ಸೆ.3,5,7,10,12 ಮತ್ತು 14 ರಂದು ಯಶವಂತಪುರದಿಂದ ಮಂಗಳೂರಿಗೆ ತೆರಳುವ ರೈಲುಗಳು ರದ್ದುಗೊಂಡಿದೆ. ಸೆ.4,6,8,11,13 ಮತ್ತು 15 ರಂದು ಯಶವಂತಪುರದಿಂದ ಕಾರವಾರ-ಹಾಸನಕ್ಕೆ ತೆರಳುವ ರೈಲುಗಳು ರದ್ದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಜನ ಸಾಧಾರಣ್ ರೈಲುಗಳು ಯಶವಂತಪುರದಿಂದ -ಹಾಸನ ಜನ ಸಾಧಾರಣ್ ರೈಲು ರೈಲು ಸಂಖ್ಯೆ  06515 ಸೆ.8 ಮತ್ತು 15 ರಂದು ಕಾರ್ಯನಿರ್ವಹಿಸಲಿವೆ. 06576 ಹಾಸನ - ಯಶವಂತುಪ ಜನ ಸಾಧಾರಣ್ ವಿಶೇಷ ರೈಲು ಸೆ.2 ಮತ್ತು 9 ರಂದು ಹಾಸನದಿಂದ ಯಶವಂತಪುರಕ್ಕೆ ಮರಳಿ ಬರಲಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com