ನಗರ ವ್ಯಾಪ್ತಿಯಲ್ಲಿರುವ 4,718 ಫ್ಲೆಕ್ಸ್, ಹೋರ್ಡಿಂಗ್ಸ್ ಗಳನ್ನು ತೆರವುಗೊಳಿಸುವ ಸಂಬಂಧ ಸಾರ್ವಜನಿಕ ಪ್ರಕಟಣೆ ನೀಡಿ, ಆ.20ರೊಳಗೆ ದಾಖಲೆಗಳ ಸಹಿತ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿತ್ತು. ಆ ಪೈಕಿ 1,.1817 ಫ್ಲೆಕ್ಸ್ ಗಳ ಮಾಲೀಕರು ಆಕ್ಷೇಪಣೆಗಳನ್ನು ಸಲ್ಲಿಸಿದ್ದರು. ಅದರಲ್ಲಿ 1,631 ಅರ್ಜಿ ಇತ್ಯರ್ಥಪಡಿಸಲಾಗಿದೆ. ಉಳಿದ ಎರಡು ಸಾವಿರಕ್ಕೂ ಅಧಿಕ ಜಾಹೀರಾತು ಫಲಕಗಳ ಮಾಲೀಕರು ಯಾವುದೇ ದಾಖಲೆ ಹಾಗೂ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ವಿವರಿಸಿದರು.