ಬೆಂಗಳೂರು: ರಫೇಲ್ ಯುದ್ದ ವಿಮಾನಗ ಖರೀದಿ ಮಹಾ ಮೋಸ, ಇದು ದೇಶದ ರಕ್ಷಣಾ ಹಗರಣಗಳ ಮಹಾತಾಯಿ, ಇದಕ್ಕೆಲ್ಲಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಜವಾಬ್ದಾರಿ ಎಂದು ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ರಫೇಲ್ ಡೀಲ್ ನಲ್ಲಿ ವಿಮಾನಗಳ ಸಂಖ್ಯೆಯಲ್ಲಿ ಬದಲಾವಣೆ ಸೇರಿದಂತೆ ಹಲವು ಅಕ್ರಮಗಳು ನಡೆದಿವೆ, ಇದರಲ್ಲಿ ಉದ್ಯಮಿ ಅನಿಲ್ ಅಂಬಾನಿ ಪ್ರಮುಖ ಪಾತ್ರ ವಹಿಸಿದ್ದಾರೆ.
2015ರಲ್ಲಿ ಮೋದಿ ಫ್ರಾನ್ಸ್ ಗೆ ಹೋಗಿ ಮಾತುಕತೆ ನಡೆದ ಬಳಿಕ, 126 ವಿಮಾನಗಳ ಬದಲಿಗೆ ಪೂರ್ಣ ಪ್ರಮಾಣದ 36 ಯುದ್ದ ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಳ್ಳಲಾಯಿತು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಇದಕ್ಕೆ ಹೆಚ್ಚುವರಿ ಹಣ ನೀಡಿದ್ದು ಹಣಕಾಸು ಸಚಿವ ಅರುಣ್ ಜೈಟ್ಲಿ ನೀಡಿದ್ದರು. ಇದಕ್ಕಾಗಿ ಅವರು ಯಾವುದೇ ಟೆಂಡರ್ ಕರೆದಿರಲಿಲ್ಲ. ನಂತರ ಅನಿಲ್ ಅಂಬಾನಿಗೆ 21 ಸಾವಿರ ಕೋಟಿ ಏಕೆ ನೀಡಲಾಗಿದೆ, ಇದರ ಹೊರತಾಗಿಯೂ ರಿಲಾಯನ್ಸ್ ಒಂದೇ ಒಂದು ಭಾಗವನ್ನು ಉತ್ಪಾದನೆ ಮಾಡಲಿಲ್ಲ.
ಬೋಫೋರ್ಸ್ ಹಗರಣದಲ್ಲಿ ಕೇವಲ 64 ಕೋಟಿ ಕಮಿಷನ್ ನಡೆದಿತ್ತು, ಇದರಲ್ಲಿ 400 ಪಟ್ಟು ಅಧಿಕ ಕಮಿಷನ್ ಇದೆ. ಇದೊಂದು ಎಲ್ಲಾ ಹಗರಣಗಳ ಮಹಾತಾಯಿ ಎಂದು ಹೇಳಿದ್ದಾರೆ.