ಸಾಂದರ್ಭಿಕ ಚಿತ್ರ
ರಾಜ್ಯ
ಪೊಲೀಸರಿಂದ ಹಣಕ್ಕಾಗಿ ಬೆದರಿಕೆ: ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಕುಟುಂಬಸ್ಥರಿಂದ ಆರೋಪ
ಮಾಜಿ ಉಪರಾಷ್ಟ್ರಪತಿ ಬಿ,ಡಿ ಜತ್ತಿ ಅವರ ಸೊಸೆ ಲಕ್ಷ್ಮಿ ಡಿ ಜತ್ತಿ ಡಿಸಿಪಿ ಅವರನ್ನು ಭೇಟಿ ಮಾಡಿದ್ದಾರೆ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಎಸಿಪಿ ಹಣ ....
ಬೆಂಗಳೂರು: ಮಾಜಿ ಉಪರಾಷ್ಟ್ರಪತಿ ಬಿ,ಡಿ ಜತ್ತಿ ಅವರ ಸೊಸೆ ಲಕ್ಷ್ಮಿ ಡಿ ಜತ್ತಿ ಡಿಸಿಪಿ ಅವರನ್ನು ಭೇಟಿ ಮಾಡಿದ್ದಾರೆ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಎಸಿಪಿ ಹಣ ಮತ್ತು ಆಸ್ತಿಗಾಗಿ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.
ಎಸಿಪಿ ಸುಧಾಮ ನಾಯಕ್ ಮತ್ತು ಸಬ್ ಇನ್ಸ್ ಪೆಕ್ಟರ್ ಸೋಮಶೇಖರ್ ವಿರುದ್ಧ ದೂರು ನೀಡಿದ್ದಾರೆ ಎಂದು ವೈಟ್ ಪೀಲ್ಡ್ ಡಿಸಿಪಿ ಅಬ್ದುಲ್ ಅಹದ್ ಹೇಳಿದ್ದಾರೆ.
ಆದರೆ ಈ ಸಂಬಂಧ ದೂರು ದಾಖಲಾಗಿಲ್ಲ, ಸೋಮವಾರ ಬಂದು ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಆದರೆ ಸತ್ಯಾಸತ್ಯತೆಗಳನ್ನು ಪರಿಶೀಲಿಸಿದ ನಂತರ ದೂರು ದಾಖಲಿಸಿಕೊಳ್ಳುವುದಾಗಿ ಡಿಸಿಪಿ ಹೇಳಿದ್ದಾರೆ.
ಮೇ 24, 2017 ರಂದು, ವೈಟ್ ಫೀಲ್ಡ್ ನಲ್ಲಿರುವ ದ್ವಾರಕಾಮಯಿ ಲೇಔಟ್ ನಲ್ಲಿರುವ, ಚರಂಡಿ ಸಂಸ್ಕರಣಾ ಘಟಕದಲ್ಲಿ ಇಬ್ಬರು ಕಾರ್ಮಿಕರು ಸ್ವಚ್ಛಗೊಳಿಸಲು ಬಂದಿದ್ದರು, ಅದರಲ್ಲಿ ಒಬ್ಬ ಕಾರ್ಮಿಕ ಉಸಿರುಗಟ್ಟಿ ಸಾವನಪ್ಪಿ ಮತ್ತೊಬ್ಬ ಗಾಯಗೊಂಡಿದ್ದ.
ತನಿಖೆ ನಡೆಸುವಾಗ ಎಸಿಪಿ 5 ಲಕ್ಷ ಮತ್ತು ಸೋಮಶೇಖರ್ 2 ಲಕ್ಷ ರು ಹಣವನ್ನು ನಮ್ಮ ಕುಟುಂಬದವರಿಂದ ತೆಗೆದುಕೊಂಡಿದ್ದರು. ಆದರೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವಾಗ, ದಂಪತಿ ಹೆಸರು ಸೇರಿಸುವುದಿಲ್ಲ ಎಂದು ಹೇಳಿದ್ದರು, ಆದರೆ ಚಾರ್ಜ್ ಶೀಟ್ ನಲ್ಲಿ ಇಬ್ಬರ ಹೆಸರು ಸೇರಿಸಿದ್ದಾರೆ.ಕೇಸ್ ಕ್ಲೋಸ್ ಮಾಜಲು ಎಸಿಪಿ ಮತ್ತಷ್ಟು ಹಣ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಕಿರುಕುಳದ ಬಗ್ಗೆ ಸತತವಾಗಿ ಮಾಧ್ಯಮದವರಿಗೆ ತಿಳಿಸಿದ್ದರು, ಜೊತೆಗೆ ಡಿಸಿಪಿ ಅವರಿಗೂ ದೂರು ನೀಡಿದ್ದಾರೆ, ಜೊತೆಗೆ ಲಕ್ಷ್ಮಿ ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.
ಈ ಸಂಬಂಧ ವೈಟ್ ಫೀಲ್ಡ್ ಪೊಲೀಸರನ್ನು ಸಂಪರ್ಕಿಸಿದಾಗ , ಜತ್ತಿ ದಂಪತಿ ಪೊಲೀಸರ ವಿರುದ್ಧ ತಪ್ಪು ಆರೋಪ ಮಾಡುತ್ತಿದ್ದಾರೆ, ಹೀಗಾಗಿ ಸಬ್ ಇನ್ಸ್ ಪೆಕ್ಟರ್ ಸೋಮಶೇಖರ್ ದಂಪತಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಲೇಔಟ್ ನ ಸಮಸ್ಯೆಗಳ ಬಗ್ಗೆ ಹೇಳಿದಾಗ ದಾನಪ್ಪ ಜತ್ತಿ ಗನ್ ಹಿಡಿದುಕೊಂಡು ಎಲ್ಲರಿಗೂ ಬೆದರಿಕೆ ಹಾಕಿದ್ದರು, ಸ್ಥಳೀಯರು ಪೊಲೀಸರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ನೀರು ಪೂರೈಕೆ ಮಾಡದೇ ತಡೆ ಹಿಡಿದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ