ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ; ಐವರ ಮೇಲೆ ದಾಳಿ

ಬೀದಿನಾಯಿಗಳ ಹಾವಳಿ ನಗರದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ನಿನ್ನೆ ರಾಜಾಜಿನಗರದ 6ನೇ ಬ್ಲಾಕ್ ...
ರಾಜಾಜಿನಗರದಲ್ಲಿ ಬೀದಿ ನಾಯಿಗಳ ಹಾವಳಿ
ರಾಜಾಜಿನಗರದಲ್ಲಿ ಬೀದಿ ನಾಯಿಗಳ ಹಾವಳಿ

ಬೆಂಗಳೂರು:ಬೀದಿನಾಯಿಗಳ ಹಾವಳಿ ನಗರದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ. ನಿನ್ನೆ ರಾಜಾಜಿನಗರದ 6ನೇ ಬ್ಲಾಕ್ ನ ಗುಬ್ಬಣ್ಣ ಲೇಔಟ್ ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರು ವ್ಯಕ್ತಿಗಳಿಗೆ ಬೀದಿನಾಯಿ ಕಚ್ಚಿ ಗಾಯಗೊಳಿಸಿದೆ.

ಗುಬ್ಬಣ್ಣ ಲೇ ಔಟ್ ನ ಸೈಂಟ್ ಮರಿಯಾ ಶಾಲೆಯ ಯುಕೆಜಿ ಬಾಲಕಿ ಮತ್ತು 9ನೇ ತರಗತಿ ಬಾಲಕ ನಿನ್ನೆ ಬೆಳಗ್ಗೆ ಶಾಲೆಗೆ ಹೋಗುತ್ತಿದ್ದಾಗ ಬೀದಿನಾಯಿ ಕಚ್ಚಿದೆ. 5 ವರ್ಷದ ಬಾಲಕಿ ಸಾಯಿಸಿರಿಯ ಬೆನ್ನಹಿಂದೆ ಮತ್ತು ಕಾಲಿಗೆ ನಾಯಿ ಕಚ್ಚಿತು. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಸಾಯಿಸಿರಿ ಅಪಾಯದಿಂದ ಪಾರಾಗಿದ್ದಾಳೆ.

14 ವರ್ಷದ ಬಾಲಕ ಆಕಾಶ್ ತೊಡೆ ಮತ್ತು ಕೈಗೆ ಸಹ ನಾಯಿ ಕಚ್ಚಿ ಗಾಯಗೊಳಿಸಿದೆ. ಸಾಯಿಸಿರಿ ಬಾಲಕಿಯ ಅಜ್ಜಿಗೆ ಸಹ ನಾಯಿ ಕಚ್ಚಿ ಗಾಯವಾಗಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನಿನ್ನೆ ಬೆಳಗ್ಗೆ ಶಾಲೆಗೆ ಆಟೋದಲ್ಲಿ ಹೋದ ನನ್ನ ಬಾಲಕ ಆಟೋದಿಂದ ಕೆಳಗಿಳಿದು ಸುಮಾರು 300 ಮೀಟರ್ ದೂರದಲ್ಲಿ ಶಾಲೆಗೆ ನಡೆದುಕೊಂಡು ಹೋಗುವಾಗ ಅಟ್ಟಿಸಿಕೊಂಡು ಬಂದ ನಾಯಿ ಕಚ್ಚಿದೆ. ಶಾಲೆಯ ಪಕ್ಕ  ಚರಂಡಿಯಿದ್ದು ಅಲ್ಲಿ ಕಸ, ಕೊಳಚೆಗಳನ್ನು ತಂದು ರಾಶಿ ಹಾಕಲಾಗುತ್ತಿದೆ. ಇದು ನಾಯಿಗಳಿಗೆ ಉತ್ತಮವಾಗಿದೆ. ಇಲ್ಲಿ ಸುಮಾರು ನಾಯಿಗಳು ಅಡ್ಡಾಡುತ್ತಿದ್ದು ಮಕ್ಕಳಿಗೆ ಶಾಲೆಗೆ ಓಡಾಡಲು ಕಷ್ಟವಾಗಿದೆ ಎನ್ನುತ್ತಾರೆ ಆಕಾಶ್ ತಾಯಿ ಸೆಲ್ವಿ.

ಫಲಿತಾಂಶ ನೀಡದ ಸಂತಾನ ಶಕ್ತಿಹರಣ ಚುಚ್ಚುಮದ್ದು: ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡಿದ್ದ ಸಂತಾನಹರಣ ಚುಚ್ಚುಮದ್ದು ಬೀದಿನಾಯಿಗಳನ್ನು ನಿಯಂತ್ರಿಸುವಲ್ಲಿ ಹೆಚ್ಚಿನ ಪ್ರಯೋಜನ ಕಂಡುಬಂದಿಲ್ಲ. ಒಂದು ನಾಯಿ ಪ್ರತಿ ಎರಡು ವರ್ಷಗಳಿಗೊಮ್ಮೆ 2ರಿಂದ 10 ಮರಿಗಳಿಗೆ ಜನ್ಮ ನೀಡುತ್ತದೆ. ಅದರಲ್ಲಿ ಕನಿಷ್ಠ 6 ಮರಿಗಳು ಉಳಿದುಕೊಂಡರೂ ಸಹ ಅವು 10ರಿಂದ 12 ಮರಿಗಳಿಗೆ ಜನ್ಮ ನೀಡುತ್ತವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮೇಯರ್ ಸಂಪತ್ ರಾಜ್, ಬೀದಿನಾಯಿಗಳ ಬಗ್ಗೆ ಅಧಿಕಾರಿಗಳಲ್ಲಿ ವರದಿ ಸಲ್ಲಿಸುವಂತೆ ಹೇಳಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com