ಕಾಂಗ್ರೆಸ್ ಕರೆ ನೀಡಿರುವ ಬಂದ್ ಗೆ ಐಟಿಯುಸಿ, ಎಡಪಕ್ಷಗಳ ಸಹ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಇದ್ದು, ಜೆಡಿಎಸ್ ಸಹ ಸಮ್ಮತಿ ಸೂಚಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕೇಂದ್ರ ಸರ್ಕಾರ ತೆರಿಗೆ ಹೆಚ್ಚಿಸುತ್ತಿದ್ದು, ಪೆಟ್ರೋಲ್ ದರ ಏರಿಕೆಯ ಮೇಲೆ ಇದು ಪರಿಣಾಮ ಬೀರಿದೆ ಈ ಹಿನ್ನೆಲೆಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 82 ರೂಪಾಯಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕರೆ ನೀಡಲಾಗಿರುವ ಭಾರತ್ ಬಂದ್ ಗೆ ಕೆಎಸ್ ಆರ್ ಟಿಸಿ ನೌಕರರು, ಓಲಾ, ಉಬರ್ ಚಾಲಕರು ಹಾಗೂ ಮಾಲಿಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು ಸೋಮವಾರದಂದು ಟ್ಯಾಕ್ಸಿ ಸೇವೆ ಮೇಲೆ ಪರಿಣಾಮ ಬೀರಲಿದೆ.