ಕುಣಿಗಲ್(ತುಮಕೂರು): ರಕ್ಕಸ ನಾಯಿಗಳ ದಾಳಿಗೆ 10 ವರ್ಷದ ಬಾಲಕಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಕುಣಿಗಲ್ ನಲ್ಲಿ ನಡೆದಿದೆ. .ಕುಣಿಗಲ್ ನ ಅರಸರ ಪಾಳ್ಯದಲ್ಲಿ 10 ವರ್ಷದ ಬಾಲಕಿ ತೇಜಸ್ವಿನಿ ಅಣಬೆ ಕೀಳಲೆಂದು ಹೋಗಿದ್ದ ಸಂದರ್ಭದಲ್ಲಿ ಬಾಲಕಿಯನ್ನು ಸುತ್ತುವರಿದ ನಾಯಿಗಳು ಆಕೆಯ ಎರಡೂ ಕೈಗಳನ್ನು ಕಚ್ಚಿ ತಂದಿವೆ. .ಬಾಲಕಿಯ ಚೀರಾಟವನ್ನು ಗಮನಿಸಿದ ಸಾರ್ವಜನಿಕರು ಬಾಲಕಿಯನ್ನು ರಕ್ಷಿಸಲು ಯತ್ನಿಸಿದ್ದು ಈ ವೇಳೆ ಬಾಲಕಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. .ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಾರದ ಹಿಂದೆ ಬೆಂಗಳೂರಿನ ವಿಭೂತಿಪುರಂನಲ್ಲಿ ಬೀದಿ ನಾಯಿ ದಾಳಿಗೆ ಬಾಲಕನೋರ್ವ ಬಲಿಯಾಗಿದ್ದ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics