ಚಿಕ್ಕಮಗಳೂರು: ಅನೈತಿಕ ಸಂಬಂಧ ಶಂಕೆ, ಪತ್ನಿ ತಲೆ ಕಡಿದು ಠಾಣೆಗೆ ತಂದ ಪತಿ!

ಪತ್ನಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಶಂಕಿಸಿದ ಪತಿಯೊಬ್ಬ ಪತ್ನಿಯ ಕೊಲೆ ಮಾಡಿ ಆಕೆಯ ತಲೆಯೊಡನೆ ಪೋಲೀಸರಿಗೆ ಶರಣಗಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಚಿಕ್ಕಮಗಳೂರು: ಪತ್ನಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಶಂಕಿಸಿದ ಪತಿಯೊಬ್ಬ ಪತ್ನಿಯ ಕೊಲೆ ಮಾಡಿ ಆಕೆಯ ತಲೆಯೊಡನೆ ಪೋಲೀಸರಿಗೆ ಶರಣಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಶಿವನಿ ಎಂಬಲ್ಲಿ ಈ ಘಟನೆ ನಡೆದಿದ್ದು ರೂಪ (30) ಕೊಲೆಯಾದ ಮಹಿಳೆ.ಆಕೆಯ ಪತಿ ಸತೀಶ್ ಪತ್ನಿಯನ್ನು ಕೊಂದು ಆಕೆಯ ತಲೆಯನ್ನು ಪೋಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ.
ರೂಪಾ ಅನೈತಿಕ ಸಂಬಂಧ ಹೊಂದಿದ್ದಳೆಂದು ಆರೋಪಿ ಸತೀಶ್ ಹೇಳಿದ್ದು ಅದಕ್ಕಾಗಿಯೇ ಆಕೆಯನ್ನು ಕೊಂದದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ತಲೆ ಹಿಡಿದು ಬಸ್ ನಲ್ಲಿ 20 ಕಿ.ಮೀ ಪ್ರಯಾಣ!
ಸತೀಶ್ ಮತ್ತು ರೂಪ ಐದು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದು ಬೆಂಗಳೂರಿನಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸತೀಶ್ ಗೆ ರೂಪಾ ಶಿವನಿ ಗ್ರಾಮದಲ್ಲಿ ಸುನೀಲ್ ಎನ್ನುವವನೊಡನೆ ಅನೈತಿಕ ಸಂಬಂಧ ಹೊಂದಿದ್ದಳೆಂದು ಅನುಮಾನ ಹುಟ್ಟಿದೆ. ತಕ್ಷಣ ಕತ್ತಿಯಿಂದ ಪತ್ನಿಯ ಶಿರವನ್ನೇ ಕಡಿದಿದ್ದಾನೆ.ಬಳಿಕ ತಲೆಯನ್ನು ಬ್ಯಾಗಿನಲ್ಲಿಟ್ಟುಕೊಂಡು ಸುಮಾರು 20 ಕಿ.ಮೀ. ದೂರವನ್ನು ಬಸ್ ನಲ್ಲಿ ಪ್ರಯಾಣಿಸಿ ಪೋಲೀಸ್ ಠಾಣೆಗೆ ಬಂದಿದ್ದಾನೆ.
ಹತ್ಯೆಗೆ ಬಳಸಿದ ಕತ್ತಿ ಹಾಗೂ ಪತ್ನಿಯ ತಲೆ ಎರಡನ್ನೂ ಪೋಲೀಸರಿಗೆ ಒಪ್ಪಿಸಿದ ಸತೀಶ್ ಪೋಲೀಸರಿಗೆ ಶರಣಾಗಿದ್ದಾನೆ.
ಅಜ್ಜಂಪುರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com