ಜಿಹಾದ್ ಗೆ ಹಣ ಒದಗಿಸುವ ಸಲುವಾಗಿ ಆಭರಣ ಮಳಿಗೆ ದರೋಡೆ: ಬಂಧಿತ ಜೆಎಂಬಿ ಉಗ್ರರಿಂದ ಸ್ಫೋಟಕ ಮಾಹಿತಿ!

ಜಮಾತ್‌-ಉಲ್‌-ಮುಜಾಹಿದೀನ್‌ ಬಾಂಗ್ಲಾದೇಶ್‌ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಜಮಾತ್‌-ಉಲ್‌-ಮುಜಾಹಿದೀನ್‌ ಬಾಂಗ್ಲಾದೇಶ್‌ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಈ ಇಬ್ಬರು ಉಗ್ರರು ನಗರದ ಆಭರಣ ಮಳಿಗೆಗಳಲ್ಲಿ ಚಿನ್ನಾಭರಣ ದರೋಡೆ ಮಾಡಿದ್ದಾರೆ ಎಂಬ ಸತ್ಯ ವಿಚಾರಣೆ ವೇಳೆ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳಿಗೆ ತಿಳಿದು ಬಂದಿದೆ.
ಬೆಂಗಳೂರು ಸೇರಿದಂತೆ ಇನ್ನಿತರ ಸಿಟಿಗಳಲ್ಲಿ ಈ ಉಗ್ರರು ತಮ್ಮ ಕೈ ಚಳಕ ತೋರಿದ್ದಾರೆ, ಜಹಿದುಲ್ಲಾ ಇಸ್ಲಾಮ್ ಅಲಿಯಾಸ್ ಕೌಸರ್ ಮತ್ತು ಅದಿಲ್ ಅಲಿಯಾಸ್ ಅಸಾದಿಲ್ಲಾ ಎಂಬ ಉಗ್ರರನ್ನು ಬೆಂಗಳೂರಿನಲ್ಲಿ ಎನ್ ಐ ಎ ಬಂಧಿಸಿತ್ತು.
ಬಿಹಾರದ ಬೋಧ್‌ಗಯಾದಲ್ಲಿ ಸ್ಫೋಟ (2018 ಜನವರಿ 19 ) ಪ್ರಕರಣದ ಸೂತ್ರಧಾರ. ಅಂದು ಬೋಧ್‌ಗಯಾಕ್ಕೆ ಬೌದ್ಧ ಧರ್ಮಗುರು ದಲಾೖ ಲಾಮಾ ಅವರು ಭೇಟಿ ನೀಡಿ ಮಹಾಬೋಧಿ ಪ್ರಾರ್ಥನಾ ಮಂದಿರಕ್ಕೆ ತೆರಳಿದ ಕೆಲವೇ ಗಂಟೆಗಳ ಬಳಿಕ ಕಡಿಮೆ ತೀವ್ರತೆಯ ಬಾಂಬ್‌ಗಳು ಸ್ಫೋಟಗೊಂಡಿದ್ದವು. ಇನ್ನೂ ಅಕ್ಟೋಬರ್ 2014 ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ಬುರ್ದ್ವಾನ್ ಸ್ಪೋಟ ಪ್ರಕರಣದ ಆರೋಪಿಗಳಾಗಿದ್ದಾರೆ.
ತಮ್ಮ ಜಿಹಾದ್ ಯುದ್ದಕ್ಕೆ ಹಣ ಒದಗಿಸುವ ಸಲುವಾಗಿ ದರೋಡೆ ಐಡಿಯಾ ಹೊಳೆದಿದ್ದಾಗಿ ಕೌಸರ್ ವಿಚಾರಣೆ ವೇಳೆ ಹೇಳಿದ್ದಾನೆ. ಬಾಂಗ್ಲಾ ಸರ್ಕಾರದ ಒತ್ತಡ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅಲ್ಲಿಂದ ಬರುತ್ತಿದ್ದ ಹಣ ನಿಂತು ಹೋಯಿತು. ನಮಗೆ ಬೇರೇ ಅವಕಾಶಗಳೇ ಇರಲಿಲ್ಲ, ಹೀಗಾಗಿ ಭಯೋತ್ಪಾದಕ ಚಟುವಚಟಿಕೆಗಳಿಗೆ ಹಣ ಒದಗಿಸುವ ಸಲುವಾಗಿ ದರೋಡೆ ನಡೆಸಿದ್ದಾಗಿ ಹೇಳಿದ್ದಾನೆ.
ಬೆಂಗಳೂರಿನ ಮೂರು ಆಭರಣ ಮಳಿಗೆಗಳಲ್ಲಿ ದರೋಡೆ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಮಾರ್ಚ್ ತಿಂಗಳಿಂದ ಅಪರಾಧ ಪ್ರಕರಣ ನಡೆಯತ್ತಿದ್ದು ಕರ್ನಾಟಕ ಪೊಲೀಸರಿಗೆ ದರೋಡೆ ಬಗ್ಗೆ ಮಾಹಿತಿ ನೀಡಿದ್ದೇವು, ಎಂದು ಎನ್ ಐ ಎ ಅಧಿಕಾರಿ ತಿಳಿಸಿದ್ದಾರೆ.
ಕರ್ಮಾಟಕದ ವಿವಿಧ ಭಾಗಗಳಿಂದ ಮತ್ತಷ್ಟು  ಈ ಸಂಘಟನೆಗೆ ಸೇರಿದವರಿದ್ದು, ಇತ್ತೀಚೆಗೆ ಜೆಎಂಬಿ  ಸಂಘಟನೆಗೆ ಸೇರಿದ ವ್ಯಕ್ತಿಯನ್ನು ಕೊಲ್ಕೊತಾದಲ್ಲಿ  ವಶಕ್ಕೆ ಪಡೆಯಲಾಗಿದೆ, ಸಂಘಟನೆಯ ನಾಯಕ ಮಿಜಾನ್ ಎಂಬುವನ ಆದೇಶದಂತೆ ಆಭರಣ ಮಳಿಗೆ ದರೋಡೆ ನಡೆಸಲಾಯಿತು 
ಪೈಪ್ ಲೈನ್ ಮೂಲಕು ಮೂರು ಚಿನ್ನಾಭರಣ ಮಳಿಗೆ ದೋಚಲಾಗಿದೆ. ಸಂಘಟನೆಗೆ ಸೇರಿದ ಇಬ್ಬರನ್ನು ಕೇರಳದಲ್ಲಿ ಬಂಧಿಸಲಾಗಿದೆ. ನಿಷೇಧಿತ ಸಂಘಟನೆ ಮತ್ತಷ್ಟು ಬಲ ಪಡಿಸಲು ದರೋಡೆಗೆಗಿಳಿದಿದ್ದು ತಿಳಿದು ಬಂದಿದೆ,.
ಮೇ 14 2009 ರಲ್ಲಿ ಕೌಸರ್ ನನ್ನು ಬಾಂಗ್ಲಾದೇಶದಲ್ಲಿ ಬಂಧಿಸಲಾಗಿತ್ತು, 2013 ರ ಫೆಬ್ರವರಿ ವರೆಗೂ ಆತ ಜೈಲಿನಲ್ಲಿದ್ದ, ತಮ್ಮ ಗುರಿ ಮುಟ್ಟಲು ನಿಷೇಧಿತ ಉಗ್ರ ಸಂಘಟನೆಗಳು ಚಿನ್ನಾಭರಣೆ ದೋಚಲು ಮುಂದಾಗಿರುವುದು ಇದೇ ಮೊದಲಲ್ಲ,  ಮಧ್ಯಪ್ರದೇಶದ ಸಿಮಿ ಸಂಘಟನೆಗೆ ಸೇರಿದ ಉಗ್ರರು ಕೂಡ ಹಲವು ಕಡೆ ದರೋಡೆ ನಡೆಸಿದ್ದರು, ಇನ್ನೂ ಕೊಲ್ಕಾತಾದಲ್ಲಿ ಶೂ ಮಾರಾಟ ಉದ್ಯಮಿಯನ್ನು  ಅಪಹರಿಸಿದ್ದರು ಇನ್ನೂ 2002 ರಲ್ಲಿ ಕೊಲ್ಕೋತಾದಲ್ಲಿರುವ ಅಮೆರಿಕಾ ಕಟ್ಟಡದ ಮೇಲೆ ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com