
ಮೈಸೂರು: ಇತ್ತೀಚಿಗೆ ಮಹಾಮಳೆ ಹಾಗೂ ಪ್ರವಾಹದಿಂದ ನಲುಗಿದ ಕೊಡಗು ಜಿಲ್ಲೆಗೆ ವಿಘ್ನ ವಿನಾಶಕ ಗಣೇಶ ಭೇಟಿ ನೀಡಿದ್ದಾನೆ !
ಹೌದು. ಇಲ್ಲಿನ ಕುಂಬಾರಗೆರೆ ಪರಿಸರ ಸ್ನೇಹಿ ಕಲಾವಿದ ರೇವಣ್ಣ ಅವರು ರಚಿಸಿರುವ ಗಣೇಶ ಮೂರ್ತಿಗಳು, ದುರಂತದ ಕಥೆ ಹೇಳುತ್ತಿವೆ. ಕೊಡಗು ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರಾಕೃತಿಕ ವಿಕೋಪವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರೀಸಲಾಗಿದೆ.
ಚಾಮರಾಜೇಂದ್ರ ದೃಶ್ಯ ಕಲಾ ಅಕಾಡೆಮಿಯ ಪದವೀಧರನಾಗಿರುವ ರೇವಣ್ಣ, ರಚಿಸಿರುವ ಈ ಮೂರ್ತಿಯನ್ನು ವಿರಾಜಪೇಟೆಯಲ್ಲಿನ ಗಣೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.
ಆದಾಗ್ಯೂ, ಗಣೇಶ ಮೂರ್ತಿಗಳ ಬಂದಂತಹ ಹಣದಲ್ಲಿ ಜಿಲ್ಲಾಧಿಕಾರಿಗಳ ಪ್ರವಾಹ ಪರಿಹಾರ ನಿಧಿಗೆ 10 ಸಾವಿರ ರೂಪಾಯಿ ನೀಡಲು ಅವರು ನಿರ್ಧರಿಸಿದ್ದಾರೆ.
ಕಳೆದ ತಿಂಗಳು ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಉಂಟಾಗಿತ್ತು. ಇಂತಹ ಪ್ರಮುಖ ವಿಷಯಗಳ ಕಡೆಗೆ ಜನರ ಗಮನ ಸೆಳೆಯುವ ನಿಟ್ಟಿನಲ್ಲಿ ಇಂತಹ ಮೂರ್ತಿಗಳನ್ನು ಮಾಡಿರುವುದಾಗಿ ರೇವಣ್ಣ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಹಾಗೂ ಗಣೇಶ ಗಾಳಿ ಪಟ ಹಾರಿಸುವಂತಹ ಮೂರ್ತಿಗಳನ್ನು ಸಹ ವಿನ್ಯಾಸಗೊಳಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಭತ್ತದ ಜಮೀನಿನಲ್ಲಿ ಗಣೇಶ, ಆಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ಮೂರ್ತಿಗಳನ್ನು ಸಹ ಅವರು ಮಾಡಿದ್ದಾರೆ.
550ಕ್ಕಿಂತಲೂ ಹೆಚ್ಚು ಸಣ್ಣ, ಮಧ್ಯಮ ಹಾಗೂ ಬೃಹತ್ ಗಾತ್ರದ ಗಣೇಶ ಮೂರ್ತಿಗಾಗಿ ತಮ್ಮಗೆ ಕೋರಿಕೆ ಬಂದಿರುವುದಾಗಿ ರೇವಣ್ಣ ತಿಳಿಸಿದ್ದಾರೆ.
Advertisement