ಪ್ರವಾಹದಿಂದ ಕರ್ನಾಟಕ, ಕೇರಳ ಕಾಫಿ ಬೆಳೆ ಮೇಲೆ ದೀರ್ಘಾವಧಿಯ ಪರಿಣಾಮ

ಕೇರಳ, ಕೊಡಗು ಎದುರಿಸಿದ ಜಲ ಪ್ರವಾಹದಿಂದಾಗಿ ಕಾಫಿ ಬೆಳೆ ಮೇಲೆ ದೀರ್ಘಾವಧಿಯ ಪರಿಣಾಮ ಉಂಟಾಗಲಿದೆ ಎಂದು ಕಾಫಿ ರಫ್ತು ಸಂಘದ ಅಧ್ಯಕ್ಷ ರಮೇಶ್ ರಾಜಾ ಹೇಳಿದ್ದಾರೆ.
ಪ್ರವಾಹದಿಂದ ಕರ್ನಾಟಕ, ಕೇರಳ ಕಾಫಿ ಬೆಳೆ ಮೇಲೆ ದೀರ್ಘಾವಧಿಯ ಪರಿಣಾಮ
ಪ್ರವಾಹದಿಂದ ಕರ್ನಾಟಕ, ಕೇರಳ ಕಾಫಿ ಬೆಳೆ ಮೇಲೆ ದೀರ್ಘಾವಧಿಯ ಪರಿಣಾಮ
ಬೆಂಗಳೂರು: ಕೇರಳ, ಕೊಡಗು ಎದುರಿಸಿದ ಜಲ ಪ್ರವಾಹದಿಂದಾಗಿ ಕಾಫಿ ಬೆಳೆ ಮೇಲೆ ದೀರ್ಘಾವಧಿಯ ಪರಿಣಾಮ ಉಂಟಾಗಲಿದೆ ಎಂದು ಕಾಫಿ ರಫ್ತು ಸಂಘದ ಅಧ್ಯಕ್ಷ ರಮೇಶ್ ರಾಜಾ ಹೇಳಿದ್ದಾರೆ. 
ಜಲಪ್ರವಾಹದಿಂದಾಗಿ ಈ ವರ್ಷ ಒಟ್ಟಾರೆ ಕಾಫಿ ಉತ್ಪಾದನೆಯಲ್ಲಿ5ನೇ ಒಂದರಷ್ಟು ಕಾಫಿ ಬೆಳೆ ನಾಶವಾಗುವುದಷ್ಟೇ ಅಲ್ಲದೇ ಈಗ ನಾಶವಾಗಿರುವ ತೋಟಗಳ ಪರಿಸ್ಥಿತಿ ಹಿಂದಿನಂತೆಯೇ ಆಗಲು ಹಲವು ವರ್ಷಗಳೇ ಬೇಕಾಗುತ್ತದೆ. ಜಲಪ್ರವಾಹದಲ್ಲಿ ಉಳಿದುಕೊಂಡಿರುವ ಕಾಫಿ ಗಿಡಗಳಿಗೂ ಈಗ ಹಾನಿಯುಂಟಾಗುವ ಸಾಧ್ಯತೆ ಇದೆ. 
ಒಂದು ಅಂದಾಜಿನ ಪ್ರಕಾರ ಜಲಪ್ರವಾಹದಿಂದ ರಾಜ್ಯದ ಮೂರು ಜಿಲ್ಲೆಗಳಿಂದ ಸುಮಾರು 700 ಕೋಟಿ ನಷ್ಟ ಉಂಟಾಗಲಿದ್ದು, ನಾಶವಾಗಿರುವ ಕಾಫಿ ಪ್ಲಾಂಟೇಷನ್ ನ್ನು ಸರಿ ದಾರಿಗೆ ತರುವುದಕ್ಕೆ ಕಾಫಿ ಬೆಳೆಗಾರರಿಗೆ ಆರ್ಥಿಕ ಹೊರೆಯೂ ಉಂಟಾಗಲಿದೆ. ಕಾಫಿ ಬೋರ್ಡ್ ನ ಪ್ರಕಾರ, ಭೂಕುಸಿತದಿಂದಾಗಿ 1,000 ಹೆಕ್ಟೇರ್ ಕಾಫಿ ತೋಟ ನಾಶವಾಗಿದೆ ಎಂದು  ರಮೇಶ್ ರಾಜಾ ಮಾಹಿತಿ ನೀಡಿದ್ದಾರೆ. 
ಮುಂಗಾರಿಗೂ ಮುನ್ನ ಕಾಫಿ ಉತ್ಪಾದನೆ 3.5 ಲಕ್ಷ ಟನ್ ನಷ್ಟಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗಿನ ಅಂದಾಜಿನ ಪ್ರಕಾರ 2.8-03 ಲಕ್ಷ ಟನ್ ಗಳಷ್ಟಾಗಲಿದೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com