ಬೆಂಗಳೂರು: ಅನಾರೋಗ್ಯ ನಿಮಿತ್ತ ಟೈಲರ್ ಸಾವು, ಮನನೊಂದ ಅತ್ತೆ, ಸೊಸೆ ಆತ್ಮಹತ್ಯೆ!

ಅನಾರೋಗ್ಯದ ಕಾರಣ ಓರ್ವ ಟೈಲರ್ ಸಾವನ್ನಪ್ಪಿದ್ದು ಅವರ ಸಾವಿನಿಂದ ಮನನೊಂದ ತಾಯಿ ಹಾಗೂ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಅನಾರೋಗ್ಯದ ಕಾರಣ ಓರ್ವ ಟೈಲರ್ ಸಾವನ್ನಪ್ಪಿದ್ದು ಅವರ ಸಾವಿನಿಂದ ಮನನೊಂದ ತಾಯಿ ಹಾಗೂ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಮುತ್ಯಾಲನಗರದ 18ನೆ ಕ್ರಾಸ್, 12ನೆ ಎಫ್ ಮೈನ್ ನಿವಾಸಿ ಶೇಷಪಾಣಿ (44) ಅನಾರೋಗ್ಯದ ನಿಮಿತ್ತ ಸಾವನ್ನಪ್ಪಿದ್ದರು.ಇದರಿಂದ ಆಘಾತಗೊಂಡ ಅವರ ಪತ್ನಿ ಉಷಾ ನಂದಿನಿ (42) ಹಾಗೂ ತಾಯಿ ಲಕ್ಷ್ಮೀ ದೇವಿ (65)  ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಆಂಧ್ರ ಪ್ರದೇಶದವರಾದ ಇವರುಗಳು ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಟೈಲರ್ ವೃತ್ತಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಶೇಷಪಾಣಿಗೆ ಮಕ್ಕಳಿರಲಿಲ್ಲ. ತಾಯಿ, ಮಗ ಹಾಗೂ ಸೊಸೆ ಒಂದೇ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಶೇಷಪಾಣಿ  ಅನಾರೋಗ್ಯಕ್ಕೀಡಾಗಿದ್ದರು ಚಿಕಿತ್ಸೆ ಪಡೆದುಕೊಂಡರೂ ಫಲ ಕಾಣದೆ ಕಳೆದ ನಾಲ್ಕೈದು ದಿನಗಳ ಹಿಂದೆ ಮನೆಯಲ್ಲೇ ಸಾವನ್ನಪ್ಪಿದ್ದಾರೆ.
ಆದರೆ ಶೇಷಪಾಣಿ  ಸಾವಿನ ಸುದ್ದಿ ಹೊಅರಗಿನವರಿಗೆ ತಿಳಿಸದೆ ಪತ್ನಿ ಹಾಗೂ ತಾಯಿ ತಾವೂ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. 
ಘಟನೆ ನಡೆದು ಮೂರು-ನಾಲ್ಕು ದಿನಗಳಾಗಿದ್ದು ಮನೆಯಿಂದ ವಾಸನೆ ಬರುತ್ತಿದ್ದದ್ದನ್ನು ಗಮನಿಸಿ ನೆರೆಮನೆ ನಿವಾಸಿಗಳು ಶನಿವಾರ ಪೋಲೀಸರಿಗೆ ವಿಚಾರ ತಿಳಿಸಿದ್ದಾರೆ.ತಕ್ಷಣ ಸ್ಥಳಕ್ಕಾಗಮಿಸಿದ ಪೋಲೀಸರು ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮೂವರ ಮೃತದೇಹವನ್ನು ಹೊರತಂದಿದ್ದಾರೆ.
ಸಧ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು ಮೃತರ ಸಂಬಂಧಿಗಳಿಗೆ ವಿಚಾರ ತಿಳಿಸಲಾಗಿದೆ. 
ಘಟನೆ ಸಂಬಂಧ ಯಶವಂತಪುರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com