ಗೌರಿ ಲಂಕೇಶ್ ಹತ್ಯೆ ಹಿಂದೆ ಬಹು ತಂಡಗಳ ಪಿತ್ತೂರಿ :ಎಸ್ ಐಟಿ

ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಬಿರುಸುಗೊಳಿಸಿರುವ ವಿಶೇಷ ತನಿಖಾ ತಂಡ ನಿಹಾಲ್ ಆಲಿಯಾಸ್ ದಾದಾ ಮತ್ತು ಮುರಳಿ ಆಲಿಯಾಸ್ ಶಿವಾ ಎಂಬವರನ್ನು ಬಂಧಿಸಲು ಕಾಯುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು:  ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್  ಹತ್ಯೆ ಪ್ರಕರಣದ ತನಿಖೆ ಬಿರುಸುಗೊಳಿಸಿರುವ ವಿಶೇಷ ತನಿಖಾ ತಂಡ ನಿಹಾಲ್ ಆಲಿಯಾಸ್ ದಾದಾ ಮತ್ತು ಮುರಳಿ ಆಲಿಯಾಸ್  ಶಿವಾ ಎಂಬವರನ್ನು ಬಂಧಿಸಲು ಕಾಯುತ್ತಿದೆ.
ನಾಲ್ವರು ವಿಚಾರವಾದಿಗಳು ಹಾಗೂ ಅನೇಕ ಬಾಂಬ್ ಸ್ಪೋಟ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
 ವಾಸುದೇವ ಸೂರ್ಯವಂಶಿ ಬೈಕ್ ಕಳ್ಳನಾಗಿದ್ದು, ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಈತನೇ ಬೈಕ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚಿಗೆ ಮಹಾರಾಷ್ಟ್ರ ಎಟಿಎಸ್ ಪೊಲೀಸರು ಆತನ ಸ್ನೇಹಿತ  ದಾಬೊಲ್ಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶರದ್ ಕಾಲಸ್ಕರ್ ಎಂಬನಿಂದ ಬಜಾಜ್ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮಿಸ್ಕಿನ್ ಹಾಗೂ ಪರಶುರಾಮ್ ವಾಘ್ಮೋರೆ ಈ ಬೈಕ್ ಬಳಸಿದ್ದಾಗಿ ಆತನ ಹೇಳಿಕೆ ನೀಡಿದ್ದಾನೆ. ಭಯೋತ್ಪಾದಕ ನಿಗ್ರಹ ಅಧಿಕಾರಿಗಳು ಬೈಕ್ ಮಾಲೀಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಾಸುದೇವ್ ಕಳ್ಳತನ ಮಾಡಿದ್ದ ಬೈಕ್ ನ್ನು ಶರದ್ ಕಾಲಸ್ಕರ್ ನಿಗೆ ನೀಡಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com