'ನೈಸರ್ಗಿಕ ವಿಪತ್ತು' ಎದುರಿಸಲು ಸಿದ್ಧತೆ ಹೇಗೆ?: ಹೊಸ ಕೋರ್ಸ್ ಆರಂಭಿಸಲು ಬೆಂವಿವಿ ಸಿದ್ಧತೆ

ಕೊಡಗು ಜಿಲ್ಲೆಯಲ್ಲಿ ಎದುರಾದ ಪ್ರವಾಹದಂತಹ ನೈಸರ್ಗಿಗ ವಿಪತ್ತುಗಳನ್ನು ಎದುರಿಸುವುದು ಹೇಗೆ?... ನೈಸರ್ಗಿ ವಿಪತ್ತು ಎದುರಿಸಲು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು...? ಎಂಬುದರ ಕುರಿತಂತೆ ನೂತನ ಕೊರ್ಸ್'ವೊಂದನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಎದುರಾದ ಪ್ರವಾಹದಂತಹ ನೈಸರ್ಗಿಗ ವಿಪತ್ತುಗಳನ್ನು ಎದುರಿಸುವುದು ಹೇಗೆ?... ನೈಸರ್ಗಿ ವಿಪತ್ತು ಎದುರಿಸಲು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು...? ಎಂಬುದರ ಕುರಿತಂತೆ ನೂತನ ಕೊರ್ಸ್'ವೊಂದನ್ನು ಆರಂಭಿಸಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 
ಮುಂದಿನ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಪದವಿಯಲ್ಲಿ ಜಿಯೋಸ್ಪೇಷಿಯಲ್ ಟೆಕ್ನಾಲಜಿಯೊಂದಿಗೆ ವಿಪತ್ತು ನಿರ್ವಹಣೆ ಕೋರ್ಸ್, ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಕುರಿತು ಡಿಪ್ಲೋಮಾ ಕೋರ್ಸ್ ಗಳನ್ನು ಆರಂಭಿಸಲಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳ ಮತ್ತು ಜಿಯೋ-ಇನ್ಫರ್ಮ್ಯಾಟಿಕ್ಸ್ ಇಲಾಖೆ ಪ್ರಾಧ್ಯಾಪಕ ಅಸೋಕ್ ಹಂಜಗಿಯವರು ಹೇಳಿದ್ದಾರೆ. 
ವರ್ಷಗಳು ಕಳೆದಂತೆ ನೈಸರ್ಗಿ ವಿಪತ್ತುಗಳೂ ಹೆಚ್ಚಾಗುತ್ತಲಿವೆ. ಈ ಹಿಂದೆಂದೂ ಸಂಭವಿಸಿದ ವಿಪತ್ತುಗಳು ಸಂಭವಿಸುತ್ತಿವೆ. ಕೊಡಗು ಹಾಗೂ ಕೇರಳದಲ್ಲಿಯೂ ಪ್ರವಾಹ ಎದುರಾಗಿತ್ತು. ಒಡಿಸ್ಸಾದಲ್ಲಿ ಸೈಕ್ಲೋನ್ ಹಾಗೂ ಹಿಮಾಲಯಗಳಲ್ಲಿ ಮೇಘ ಸ್ಫೋಟಗೊಂಡಿತ್ತು. ಹೀಗಾಗಿ ನೈಸರ್ಗಿಕ ವಿಪತ್ತು ಕುರಿತಂತೆ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನೈಸರ್ಗಿಕ ವಿಪತ್ತುಗಳನ್ನು ಊಹಿಸಲು ಸಾಧ್ಯವಿಲ್ಲ. ಆದರೆ, ಅವುಗಳನ್ನು ನಿಭಾಯಿಸಲು ಸಿದ್ಧತೆಗಳನ್ನು ನಡೆಸಬಹುದು ಎಂದು ತಿಳಿಸಿದ್ದಾರೆ. 
ಸ್ನಾತಕೋತ್ತರ ಪದವಿಯಲ್ಲಿ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿರುವ ಹೊಸ ಕೋರ್ಸ್ ನಲ್ಲಿ ದೂರ ಸಂವೇದಿ, ವಿಪತ್ತು ನಿರ್ವಹಣಾ ವ್ಯವಸ್ಥೆಗಳ ಅನ್ವಯಗಳು, ಸನ್ನದ್ಧತೆ ಮತ್ತು ವಿಪತ್ತು ಗಳ ಮೌಲ್ಯಮಾಪನದ ಕಾರ್ಯವಿಧಾನಗಳು, ಭೂ-ಪ್ರಾದೇಶಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಷಯಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಇದಲ್ಲದೆ ಸರ್ಕಾರದ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಹಾಯಗಳನ್ನು ಪಡೆದುಕೊಳ್ಳುತ್ತೇವೆ ಎಂದಿದ್ದಾರೆ. 
ಪ್ರಸ್ತುತ ಸ್ನಾತಕೋತ್ತರ ಪದವಿಯಲ್ಲಿ ಭೂಗೋಳ ವಿಷಯವಿದ್ದು, ಭೌಗೋಳಿಕ ಮಾಹಿತಿ ವಿಜ್ಞಾನ ಮತ್ತು ಜಿಯೋ ಇನ್ಫಾರ್ಮೆಟಿಕ್ಸ್ ಡಿಪ್ಲೋಮಾ ಕೋರ್ಸಗಳಿವೆ. ಇದರೊಂದಿಗೆ ಸುಸ್ಥಿರ ಗ್ರಾಮೀಣ ಅಭಿವೃದ್ಧಿ ವಿಷಯವನ್ನು ಸೇರ್ಪಡೆಗೊಳಿಸಲು ಪ್ರಸ್ತಾವನೆ ಮುಂದಿಡಲಾಗಿದೆ. ಇದಲ್ಲದೆ, ಗ್ರಾಮೀಣ ಪ್ರದೇಶಗಳನ್ನು ದತ್ತು ಪಡೆಯುವ ವಿಚಾರವನ್ನೂ ಮುಂದಿಟ್ಟಿದ್ದೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com