ಬೆಂಗಳೂರು: ಮೂವರು ತೆರಳುತ್ತಿದ್ದ ಬೈಕಿಗೆ ಒದ್ದ ಸಂಚಾರಿ ಪೊಲೀಸರು, ಓರ್ವ ಸಾವು

ಬಾಣಸವಾಡಿ ಸಂಚಾರಿ ಪೊಲೀಸರು, ನಿಮಯ ಉಲ್ಲಂಘಿಸಿ ಮೂವರು ತೆರಳುತ್ತಿದ್ದ ಸ್ಕೂಟರ್ ಗೆ ಕಾಲಿನಿಂದ ಒದ್ದ ಪರಿಣಾಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಾಣಸವಾಡಿ ಸಂಚಾರಿ ಪೊಲೀಸರು, ನಿಮಯ ಉಲ್ಲಂಘಿಸಿ ಮೂವರು ತೆರಳುತ್ತಿದ್ದ ಸ್ಕೂಟರ್ ಗೆ ಕಾಲಿನಿಂದ ಒದ್ದ ಪರಿಣಾಮ ಸಮತೋಲನ ಕಳೆದುಕೊಂಡ ಬೈಕ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟಿದ್ದಾರೆ.
ಕಳೆದ ಮಂಗಳವಾರ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚೇತನ್(25)ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದು, ಪೊಲೀಸರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೈಕಿನಲ್ಲಿದ್ದ ಮತ್ತೊಬ್ಬ ಯುವಕ ಕಿರಣ್(22) ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿನಯ್(21) ಎಂಬ ಯುವಕ ಬೈಕ್ ಚಲಾಯಿಸುತ್ತಿದ್ದರು.
ಹೆಣ್ಣೂರು ಸಮೀಪ ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕರ ಬೈಕ್ ಅನ್ನು ಇಬ್ಬರು ಸಂಚಾರಿ ಪೊಲೀಸರು ಚೇಸ್ ಮಾಡುತ್ತಿದ್ದ ವೇಳೆ ಓರ್ವ ಪೊಲೀಸ್ ಕಾಲಿನಿಂದ ಯುವಕರಿಗೆ ಬೈಕ್ ಗೆ ಒದ್ದಿದ್ದಾರೆ. ನಿಯಂತ್ರಣ ಕಳೆದುಕೊಂಡ ವಿನಯ್ ಬೈಕ್ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ವಿನಯ್ ಅಂಕಲ್ ವೆಂಕಟೇಶ್ ಅವರು ಹೇಳಿದ್ದಾರೆ. 
ಇನ್ನು ಪೊಲೀಸರು ಬೈಕ್ ಚೇಸ್ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೇರೆಯಾಗಿದೆ. ಆದರೂ ಬಾಣಸವಾಡಿ ಪೊಲೀಸರು ಮಾತ್ರ ನಾವು ಬೈಕ್ ಚೇಸ್ ಮಾಡಿಲ್ಲ. ಯೂ ಟರ್ನ್ ತೆಗೆದುಕೊಳ್ಳುವಾಗ ಅವರೇ ಟಾಟಾ ಏಸ್ ಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳುತ್ತಿದ್ದಾರೆ.
ಈ ಸಂಬಂಧ ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿನಯ್, ಟಾಟಾ ಏಸ್ ಚಾಲಕ ಕೃಷ್ಣ ಕುಮಾರ್ ಅವರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ. ಅಲ್ಲದೆ ಟಾಟಾ ಏಸ್ ನಲ್ಲಿದ್ದ ಟೆಕ್ನಿಸಿಯನ್ ಮಂಜುನಾಥ್ ಅವರನ್ನೇ ದೂರುದಾರನನ್ನಾಗಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com