ಬೆಂಗಳೂರು ನಗರದಲ್ಲಿ 80 ಲಕ್ಷಕ್ಕೂ ಹೆಚ್ಚು ವಾಹನಗಳು: ರಸ್ತೆಗಳ ಸಾಮರ್ಥ್ಯಕ್ಕಿಂತ 5 ಪಟ್ಟು ಹೆಚ್ಚು!

ರಾಜಧಾನಿ ಬೆಂಗಳೂರಿನ ವಾಹನ ಸಂಚಾರ ದಟ್ಟಣೆ ಸಮಸ್ಯೆ ದೇಶ, ವಿದೇಶಗಳ ಕಚೇರಿಗಳಲ್ಲೂ ಚರ್ಚೆಯಾಗತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸಂಚಾರ ದಟ್ಟಣೆ ಸಮಸ್ಯೆ ದೇಶ, ವಿದೇಶಗಳ ಕಚೇರಿಗಳಲ್ಲೂ ಚರ್ಚೆಯಾಗತ್ತಿದೆ.ನಗರದಲ್ಲಿ 80 ಲಕ್ಷಕ್ಕೂ ಹೆಚ್ಚಿನ ವಾಹನಗಳಿದ್ದು,  ರಸ್ತೆಗಳ ಸಾಮರ್ಥ್ಯಕ್ಕಿಂತ ಐದು ಪಟ್ಟು ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ದಟ್ಟವಾಗಿದೆ.

ಸಾರಿಗೆ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ ಪ್ರತಿನಿತ್ಯ ಒಟ್ಟಾರೇ 1752 ವಾಹನಗಳು ರಸ್ತೆಗೆ ಇಳಿಯುತ್ತಿವೆ. ಬೇರೆ ರಾಜ್ಯದಿಂದ ಬರುವ ವಾಹನಗಳಲ್ಲೇ ಲೆಕ್ಕಹಾಕದೆ  ಇದೊಂದೆ  ವಾಹನಗಳ ಸಂಖ್ಯೆ  80 ಲಕ್ಷ ಮುಟ್ಟಲು ಪ್ರಮುಖ ಕಾರಣವಾಗುತ್ತಿದೆ. ಇದರಿಂದಾಗಿ ವಾಹನಗಳ ವೇಗ ಪ್ರತಿ ಗಂಟೆಗೆ 10 ಕಿಲೋ ಮೀಟರ್   ನಷ್ಟು ಕಡಿಮೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಗರದಲ್ಲಿ 93 ಸಾವಿರ ರಸ್ತೆಗಳಿದ್ದು, 14 ಸಾವಿರ ಕಿಲೋಮೀಟರ್ ವರೆಗೂ ವ್ಯಾಪಿಸಿವೆ. ಕೇವಲ 17 ಲಕ್ಷ  ವಾಹನಗಳು ಮಾತ್ರ ಯಾವುದೇ ಸಂದರ್ಭದಲ್ಲೂ ಸಂಚರಿಸಬಹುದು, ಈ ಸಂಖ್ಯೆಯೇ ನಿರ್ವಹಣೆಯಾದರೆ, ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಬಹುದು, ಆದಾಗ್ಯೂ  ಹಾನಿಗೊಂಡ ರಸ್ತೆಯಿಂದಾಗಿ  ಇದು ಹಗಲು ಕನಸಿನಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ 74.92 ಲಕ್ಷ ವಾಹನಗಳಿದ್ದವು. ಕಳೆದ ಒಂದು ವರ್ಷದಲ್ಲಿ 6.39 ಲಕ್ಷ ವಾಹನಗಳು ಸೇರಿಕೊಂಡಿವೆ. 2017-18 ರಲ್ಲಿ ಪ್ರತಿನಿತ್ಯ ರಸ್ತೆಗಳಿಯುತ್ತಿದ್ದ 1600 ವಾಹನಗಳು 2017-18ರ ಅವಧಿಯಲ್ಲಿ 1600ಕ್ಕೆ ಹೆಚ್ಚಳಗೊಂಡಿವೆ. ಆದರೆ,  ರಸ್ತೆಗಳ ಅಗಲ ಮಾತ್ರ ಅಷ್ಟೇ ಪ್ರಮಾಣದಲ್ಲಿಯೇ ಇದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಾರಿಗೆ ಆಯುಕ್ತ ವಿಪಿ ಇಕ್ಕೇರಿ, ಪ್ರತಿವರ್ಷ ರಸ್ತೆಗಳ ವಿಸ್ತರಣೆ ಕಷ್ಟಸಾಧ್ಯ. ಪ್ರತಿ ಕುಟುಂಬಕ್ಕೆ ಇಷ್ಟೇ ವಾಹನಗಳು ಇರಬೇಕೆಂಬ ನಿಯಮ ಇಲ್ಲ. ಜನರ ಖರೀದಿ ಶಕ್ತಿಗೆ ಬ್ರೇಕ್ ಹಾಲಲು ಸಾಧ್ಯತೆ. ಅವರು ತಮ್ಮ ವರ್ತನೆ ಬದಲಾಯಿಸಿಕೊಂಡು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಕರೆ ನೀಡಿದರು.

ಸಂಚಾರ ದಟ್ಟಣೆಯಿಂದಾಗಿ ಅಪಘಾತಗಳು ಹೆಚ್ಚಳವಾಗುತ್ತಿವೆ.  ಕಳೆದ ನಾಲ್ಕುವರ್ಷಗಳಿಂದೀಚಿಗೆ ಬೆಂಗಳೂರಿನ ರಸ್ತೆಗಳಲ್ಲಿ 22 ಸಾವಿರ ಅಪಘಾತಗಳಾಗಿವೆ.  ಕೆಟ್ಟ ರಸ್ತೆ, ವಾಹನ ಚಾಲಕರ ಕೆಟ್ಟ ವರ್ತನೆಯಿಂದಾಗಿ ಪ್ರತಿ ನಿತ್ಯ ನಗರ ವ್ಯಾಪ್ತಿಯಲ್ಲಿ 15 ಅಪಘಾತಗಳಾಗುತ್ತಿವೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ,
ಕಾರು ಪಾರ್ಕಿಂಗ್ ಶುಲ್ಕ ಅಥವಾ ನೋಂದಣಿ ಶುಲ್ಕವನ್ನು ಹೆಚ್ಚಿಸುವುದರಿಂದ ಪರೋಕ್ಷವಾಗಿ ಹೆಚ್ಚುತ್ತಿರುವ ವಾಹನಗಳಿಗೆ ನಿಯಂತ್ರಣ ಹಾಕಬಹುದು ಎಂದು ಸಾರಿಗೆ ತಜ್ಞ ಪ್ರೋ ಎಂಎನ್ ಶ್ರೀಹರಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com