ಬೆಂಗಳೂರು: 'ನಮ್ಮ ಮೆಟ್ರೋ' ನಿಲ್ದಾಣದ ಬಳಿ ಮಾರಕಾಸ್ತ್ರ ಹಿಡಿದು ಬೆದರಿಸುತ್ತಿದ್ದ ಇಬ್ಬರ ಬಂಧನ

ಯಲಚೇನಹಳ್ಳಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಹೊಡೆದು ಸಾರ್ವಜನಿಕರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ವಾಹನದ ಗಾಜು ಒಡೆದು ....
ಬೆಂಗಳೂರು: 'ನಮ್ಮ ಮೆಟ್ರೋ' ನಿಲ್ದಾಣದ ಬಳಿ ಮಾರಕಾಸ್ತ್ರ ಹಿಡಿದು ಬೆದರಿಸುತ್ತಿದ್ದ ಇಬ್ಬರ ಬಂಧನ
ಬೆಂಗಳೂರು: 'ನಮ್ಮ ಮೆಟ್ರೋ' ನಿಲ್ದಾಣದ ಬಳಿ ಮಾರಕಾಸ್ತ್ರ ಹಿಡಿದು ಬೆದರಿಸುತ್ತಿದ್ದ ಇಬ್ಬರ ಬಂಧನ
Updated on
ಬೆಂಗಳೂರು: ಯಲಚೇನಹಳ್ಳಿಯ ನಮ್ಮ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರದಿಂದ ಹೊಡೆದು ಸಾರ್ವಜನಿಕರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ವಾಹನದ ಗಾಜು ಒಡೆದು ಚಾಲಕನ ಹತ್ಯೆಗೆ ಪ್ರಯತ್ನಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 
ಘಟನೆ ಸಂಬಂಧ ಹರ್ಷಿತ್‍ಗೌಡ (20)  ಹಾಗೂ  ಶರಣ್ (20)  ಎನ್ನುವವರನ್ನು ಸುಬ್ರಮಣ್ಯಪುರ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ.ಇವರು ಬುಧವಾರ ಸಂಜೆ ಸಮಯದಲ್ಲಿ ಯಲಚೇನಹಳ್ಳಿ ಮೆಟ್ರೋ ನಿಲ್ದಾಣ ಸಮೀಪ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುತ್ತಿದ್ದು ಸಾರ್ವಜನಿಕರಿಗೆ ಬೆದರಿಕೆ ಒಡ್ಡಿದ್ದಾರೆ. ಅದೇ ವೇಳೆ ವ್ಯಕ್ತಿಯೊಬ್ಬನಿಗೆ ಲಾಂಗ್‍ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಅದೇ ವೇಳೆ ರಸ್ತೆಯಲ್ಲಿದ್ದ ವಾಹನವೊಂದರ ಗಾಜು ಪುಡಿ ಮಾಡಿ ಚಾಲಕನಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಈ ಘಟನೆಯನ್ನು ಶ್ರೀಕಾಂತ್ ಎಂಬಾತ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ದುಷ್ಕರ್ಮಿಗಳು ಅವರ ಮೇಲೆ ಸಹ ಹಲ್ಲೆ ನಡೆಸಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೋಲೀಸರು ವಿವರಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸ್ ಇಲಾಖೆ ಪ್ರಕರಣ ನಡೆದ ಎಂಟು ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com