ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಪೋಲೀಸರ ವಿರುದ್ಧವೇ ಲೈಂಗಿಕ ಕಿರುಕುಳದ ಕಟ್ಟುಕಥೆ ಹೆಣೆದಳು!

ಯುವತಿಯೊಬ್ಬಳು ತನ್ನ ಮೇಲೆ ಪೊಲೀಸರೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ಅವರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ ನನ್ನ ಕಾಲನ್ನು ಮುರಿದಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡು....
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಯುವತಿಯೊಬ್ಬಳು ತನ್ನ ಮೇಲೆ ಪೊಲೀಸರೇ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ಅವರು ನನ್ನ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ ನನ್ನ ಕಾಲನ್ನು ಮುರಿದಿದ್ದಾರೆ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡು ಇದನ್ನು ಬೆಂಗಳೂರು ಸಿಟಿ ಪೋಲೀಸ್ ಪೇಜ್ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಹ ಟ್ಯಾಗ್ ಮಾಡಿದ್ದು ಪೋಲೀಸ್ ಅಧಿಕಾರಿಗಳನ್ನು ಪೇಚಿಗೆ ಸಿಲುಕುವಂತೆ ಮಾಡಿದೆ. 
25 ವರ್ಷದ ಖಾಸಗಿ ಕಾನೂನು ಸಂಸ್ಥೆಯ ಉದ್ಯೋಗಿಯು ತನ್ನ ಮೇಲೆ ಕೋರಮಂಗಲ ಠಾಣೆ ಎಎಸ್ಐ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.ಇದಕ್ಕಾಗಿ ಆಕೆ ವೈದ್ಯಕೀಯ ವರದಿಯನ್ನೂ ಸಾಕ್ಷ್ಯವಾಗಿ ನೀಡಿದ್ದಾಳೆ. "ನಾನು ಏಪ್ರಿಲ್ 6 ರಂದು ಕೋರಮಂಗಲ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ  ಲೈಂಗಿಕ ಆಕ್ರಮಣಕ್ಕೆ ಬಲಿಯಾಗಿದ್ದೇನೆ. ಪೊಲೀಸ್ ಅಧಿಕಾರಿ ಮದನ್ ನನ್ನ ದೇಹವನ್ನು  ಅಸಭ್ಯವಾಗಿಸ್ಪರ್ಶಿಸಿದ್ದಾರೆ, ಅವರು ನನ್ನ ಒಂದು ಕಾಲನ್ನು ಸಹ ಮುರಿದಿದ್ದಾರೆ" ಎಂದು ಆಕೆ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದಾಳೆ.
ಆದರೆ ಈ ಆರೋಪಗಳೆಲ್ಲವೂ ಸುಳ್ಲಾಗಿದೆ ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಇದಕ್ಕೆ ಮುನ್ನ ಆಕೆಯನ್ನು ಎರಡು ಪ್ರಕರಣಗಳಲ್ಲಿ ಬುಕ್ ಮಾಡಲಾಗಿದ್ದು ಆಕೆ ತನ್ನ ಮೇಲಿನ ಆರೊಪಗಳಿಂದ ಮುಕ್ತವಾಗಲು ಪೋಲೀಸರಿಂದ ದೌರ್ಜನ್ಯ ಎಂದು ನಾಟಕವಾಡಿದ್ದಾಳೆ ಎಂದು ಅವರು ವಿವರಿಸಿದರು.ಆಕೆಯನ್ನು ವಿಚಾರಣೆಗೆ ಕರೆಯಲು ಕರೆ ಮಾಡಿದ ದಿನವೇ ಆಕೆ ಮದನ್ ಮೇಲೆ ಆರೊಪ ಮಾಡಿದ್ದಾಗಿ ಪೋಲೀಸರು ಹೇಳಿದ್ದಾರೆ.
ಘಟನೆ ವಿವರ
ಏಪ್ರಿಲ್ 6 ರಂದು, ಮಹಿಳೆ ಕೋರಮಂಗಲದಲ್ಲಿ ಬೋಹೋ ಪಬ್‍ಗೆ ತೆರಳಿದ್ದಾಳೆ. ಪಾರ್ಟಿ ಮುಗಿಸಿ ವಾಪಾಸಾಗುವಾಗ ತನ್ನ ಮೊಬೈಲ್ ಫೋನ್ ಒಳಗೇ ಬಿಟ್ಟು ಬಂದಿದ್ದಾಳೆ. ಇದರ ಅರಿವಾಗುತ್ತಿದ್ದಂತೆ ಆಕೆ ಮತ್ತೆ ಪಬ್ ಬಳಿ ಹೋಗಿದ್ದು ಮೊಬೈಲ್ ಫೋನ್ ಒಳಗಡೆ ಬಿಟ್ಟುಬಂದಿದ್ದಾಗಿ ಹೇಳಿದ್ದಾಳೆ. ಆದರೆ ಆ ವೇಳೆ ಪಬ್ ಮುಚ್ಚಿತ್ತು.  ಆಗ ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಬಾಗಿಲು ತೆರೆಯಲು ಕೇಳಿದ್ದಾಳೆ. ಆಗ ಅವರು ಬೆಳಿಗ್ಗೆ ಬನ್ನಿ ಎಂದಿದ್ದನ್ನು ಕೇಳಿಮದ್ಯಪಾನದ ಮತ್ತಿನಲ್ಲಿದ್ದ ಆಕೆಗೆ ಕೋಪ ಉಕ್ಕೇರಿದೆ.ಪಬ್ ಹೊರಭಾಗದಲ್ಲಿದ್ದ ಹೂವಿನ ಕುಂಡಗಳನ್ನು ಒಡೆದು ಹಾಕಿರುವ ಆಕೆ ಶೆಟರ್ ಅನ್ನು ಸಹ ಮುರಿಯಲು ಮುಂದಾಗಿದ್ದಾಳೆ.ಇದರಿಂದ ಭಯಗೊಂಡ ಭದ್ರತಾ ಸಿಬ್ಬಂದಿ ಪೋಲೀಸರಿಗೆ ಕರೆ ಮಾಡಿದ್ದು ರಾತ್ರಿ ಗಸ್ತಿನಲ್ಲಿದ್ದ ಹೊಯ್ಸಳ ವಾಹನದ ಪೋಲೀಸರು ಸ್ಥಳಕ್ಕಾಗಮಿಸಿಸ್ಸಾರೆ. ಆಗ ಪೋಲೀಸ್ ಅಧಿಕಾರಿ ಮದನ್ ಆಕೆಗೆ ಠಾಣೆಗೆ ಬರಲು ಹೇಳಿದ್ದಾರೆ. ಆದರೆ ಮಹಿಳೆ ಮದನ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.ಅಲ್ಲದೆ ಅವರನ್ನು ದೂರಕ್ಕೆ ದೂಡಲು ಸಹ ಮುಂದಾಗಿದ್ದಾಳೆ. ಆಗ ಈ ಎಲ್ಲಾ ಕೃತ್ಯವನ್ನೂ ದಾಖಲಿಸಿಕೊಂಡು ಕರ್ತವ್ಯದಲ್ಲಿರುವ ಅಧಿಕಾರಿಗೆ ಅವಹೇಳನ ಸೇರಿ ಎರಡು ಪ್ರಕರಣಗಳನ್ನು ಆಕೆಯ ವಿರುದ್ಧ ದಾಖಲು ಮಾಡಲಾಗಿದೆ.
ಈ ನಡುವೆ ಪಬ್ ಸಿಬ್ಬಂದಿ ಸಹ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ "ಕಾನೂನು ಕ್ರಮದಿಂದ ತಪ್ಪಿಸಿಕೊಳ್ಲಲಿಕ್ಕಾಗಿ ಆಕೆ ಲೈಂಗಿಕ ಕಿರುಕುಳದ ಕಟ್ಟುಕಥೆ ಹೆಣೆದಿದ್ದಾಳೆ.ಪಬ್ ನ ಮುಂದಿದ್ದ ಸಿಸಿಟಿವಿ ಫೂಟೇಜ್  ನಮಗೆ ಸಿಕ್ಕಿದು ಇದರ ಪರಿಶೀಲನೆ ನಡೆದಿದೆ " ಪೋಲೀಸರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com